ಕೂಡಿಗೆ, ಸೆ. 2: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಸಣ್ಣಪ್ಪ, ಪ್ರಸನ್ನ, ಪ್ರಕಾಶ್ ಎಂಬವರ ನಾಟಿ ಮಾಡಿದ ಭತ್ತದ ಗದ್ದೆಯೊಳಗೆ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಂದ ಪರಿಣಾಮ ನೀರಿನ ಒತ್ತಡದಲ್ಲಿ ಕೊಚ್ಚಿ ಬಂದ ಮರಳು, ಮಣ್ಣು ತುಂಬಿದೆ.

ನೀರಿನಲ್ಲಿ ಬೆಳೆ ಕೊಚ್ಚಿ ಹೋಗಿರುವದಲ್ಲದೆ, ಭತ್ತದ ಗದ್ದೆಯಲ್ಲಿ 1 ಅಡಿಯಷ್ಟು ಮರಳು ತುಂಬಿದೆ. ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದ ನಮಗೆ ಭಾರೀ ಹೊಡೆತ ಬಿದ್ದಂತಾಗಿ, ಜೀವನ ನಡೆಸಲು ಬಹಳ ಕಷ್ಟವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.