ಸುಂಟಿಕೊಪ್ಪ, ಸೆ. 2: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ನಿವಾಸಿ ದಿ.ಮಾಧವ ಪುತ್ರ ಜನಾರ್ಧನ ಟಿ.ಎಂ. (55) ಅವರು ಆ. 24 ರಂದು ಸಂಜೆಯಿಂದ ಕಾಣೆಯಾಗಿ ರುವ ಬಗ್ಗೆ ಸುಂಟಿಕೊಪ್ಪ ಪೊಲೀಸ್‍ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ವ್ಯಕ್ತಿಯು ಕಂಡು ಬಂದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08276-262333 ಮಾಹಿತಿ ನೀಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.