ಕ್ರೀಡಾ ಪ್ರಶಸ್ತಿ ವಿಜೇತೆ ಮೂಕಳೇರ ಪದ್ಮಿನಿ
ಗೋಣಿಕೊಪ್ಪಲು, ಸೆ.4: ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಮೂಕಳೇರ ಪದ್ಮಿನಿ ಅವರಿಗೆ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಬಿಬಿಎಂಪಿ ಕಚೇರಿಯ ಗಾಜಿನ ಮನೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉಪ ಮುಖ್ಯ ಮಂತ್ರಿ ಜಿ.ಪರಮೇಶ್ವರ್, ಬಿಬಿಎಂಪಿಯ ಮೇಯರ್ ಸಂಪತ್ ಕುಮಾರ್, ಪ್ರಶಸ್ತಿ ಪ್ರದಾನ ಮಾಡಿದರು.
ಅಂತರರಾಷ್ಟ್ರೀಯ ಅಥ್ಲೇಟಿಕ್ಸ್ ನಲ್ಲಿ ಸಾಧನೆ ಮಾಡಿದ ಇವರು 2015ರಲ್ಲಿ ತಾಯ್ಲ್ಯಾಂಡ್ನ ಬ್ಯಾಂಕಾಂಕ್ನಲ್ಲಿ ನಡೆದ ಏಷ್ಯನ್ ಗ್ರಾಂಡ್ ಪಿಕ್ಸ್ನಲ್ಲಿ 400 ಮೀ. ರಿಲೆಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದಿ ದ್ದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ಇವರನ್ನು ಗೌರವಿಸಲಾಯಿತು.
ಶಾಲಾ ದಿನದಲ್ಲಿ ಕ್ರೀಡೆಯಲ್ಲಿ ಆಸಕ್ತಿ ವಹಿಸಿದ ಇವರು ಜಿಲ್ಲೆ ರಾಜ್ಯ, ಅಂತರರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದರು.
ಪ್ರಸ್ತುತ ಬೆಂಗಳೂರಿನ ಕೆನರಾ ಬ್ಯಾಂಕ್ನ ಮುಖ್ಯ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಪೊನ್ನಂಪೇಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ರವರ ದ್ವಿತೀಯ ಪುತ್ರಿಯಾಗಿದ್ದಾಳೆ.
ಕೆಂಪೇಗೌಡ ಪ್ರಶಸ್ತಿಯನ್ನು ಮೆಟ್ರೋ ವಿಭಾಗದ ಮುಖ್ಯಸ್ಥನಾಗಿ ಪಸ್ಟ್ ನ್ಯೂಸ್ ಚಾನಲ್ನ ಹಿರಿಯ ಹ್ಯಾಂಕರ್ ಆಗಿರುವ ಮೂಲತಃ ಕೊಡಗಿನ ನಿವಾಸಿಯಾಗಿರುವ ಸೋಮಣ್ಣ ಮಾಚಿಮಾಡ ಇವರಿಗೆ ಉತ್ತಮ ‘ನ್ಯೂಸ್ ರಿಪೋರ್ಟ್ ಅವಾರ್ಡ್’ಗಾಗಿ ಆಯ್ಕೆಗೊಂಡಿದ್ದು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
-ಹೆಚ್.ಕೆ.ಜಗದೀಶ್