ಸೋಮವಾರಪೇಟೆ, ಸೆ. 4: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನ ದಲ್ಲಿರುವ ಪರಿಹಾರ ಕೇಂದ್ರದಲ್ಲಿ, ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಮಾತೃ ವಂದನಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಮೊದಲ ಗರ್ಭಿಣಿಗೆ ಸರ್ಕಾರದ ಮಾತೃ ವಂದನಾ ಯೋಜನೆಯ ಮೂಲಕ 3 ಕಂತಿನಲ್ಲಿ 5 ಸಾವಿರ ರೂಪಾಯಿ ಧನ ಸಹಾಯ ನೀಡಲಾಗುತ್ತಿದ್ದು, ಫಲಾನುಭವಿಗಳು ಆಧಾರ್ ಕಾರ್ಡ್, ಚುಚ್ಚುಮದ್ದು ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ತಾಯಿ ಕಾರ್ಡ್‍ಗಳ ಜತೆಗೆ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯ ಮೇಲ್ವಿಚಾರಕಿ ಕೆ. ಶೀಲಾ ಮಾಹಿತಿ ಒದಗಿಸಿದರು.

ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯ ವಾಗಲಿದ್ದು, ಅರ್ಹರು ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಯೋಜನೆಯ ಅನುಷ್ಠಾನಕ್ಕಾಗಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡ ಅಂಗನವಾಡಿ ಕಾರ್ಯಕರ್ತೆ ನೀಲಮ್ಮ, ಸುಚಿತ್ರ, ಪುಟ್ಟಮ್ಮ, ಬೋಜಮ್ಮ, ಯೋಜನೆಯ ಕಂಪ್ಯೂಟರ್ ಆಪರೇಟರ್ ಶ್ರೀಜಾ ಅವರುಗಳನ್ನು ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.

ಪರಿಹಾರ ಕೇಂದ್ರದಲ್ಲಿರುವ 6 ವರ್ಷದೊಳಗಿನ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಅವರು ‘ರಾಗಿ ಮಿಕ್ಸ್’ ಪೊಟ್ಟಣ ಗಳನ್ನು ವಿತರಿಸಿದರು.

ಇದರೊಂದಿಗೆ ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಪರಿಹಾರ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯ ಕ್ರಮ ನಡೆಸಲಾಯಿತು. ವೈದ್ಯಾಧಿಕಾರಿ ಚೇತನ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.