ಸೋಮವಾರಪೇಟೆ, ಸೆ. 4: ಜಿಲ್ಲೆಯ ಈರ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸೋಮವಾರಪೇಟೆಯ ಪೊಲೀಸ್ ಸಿಬ್ಬಂದಿಯೋರ್ವರು ಮುಖ್ಯಮಂತ್ರಿ ಗಳ ಚಿನ್ನದ ಪದಕಕ್ಕೆ ಭಾಜನ ರಾಗಿದ್ದಾರೆ. ಕೊಡಗು ಜಿಲ್ಲಾ ಅಪರಾದ ಪತ್ತೆದಳದ ವೃತ್ತ ನಿರೀಕ್ಷಕರಾಗಿರುವ ಎಂ. ಮಹೇಶ್ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿಗೆ ಭಾಜನರಾಗಿದ್ದರೆ, ಮಡಿಕೇರಿ ವಯರ್‍ಲೆಸ್ ವಿಭಾಗದಲ್ಲಿ ಸಹಾಯಕ ಉಪನಿರೀಕ್ಷಕರಾಗಿರುವ ಬಿ.ಕೆ. ಸುರೇಶ್, ಸೋಮವಾರಪೇಟೆ ಪೊಲೀಸ್ ಠಾಣೆಯ ಪೇದೆ ಟಿ.ಎಸ್. ಶಾಜಿ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.