ಶನಿವಾರಸಂತೆ, ಸೆ. 4: ಪಡೆದ ಹಣ ನೀಡಲಿಲ್ಲವೆಂದು ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಒಡೆಯನಪುರ ಗ್ರಾಮದ ನಿವಾಸಿ ವಿ.ಸಿ. ಗಿರೀಶ್ ಓಣಂ ಹಬ್ಬದಂದು ರಾತ್ರಿ ಒಡೆಯನಪುರ ಗ್ರಾಮದಲ್ಲಿರುವ ತನ್ನ ಅತ್ತೆ ಪಾರ್ವತಿ ಎಂಬವರ ಮನೆಗೆ ತೆರಳಿ ಹಬ್ಬದ ಊಟ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅದೇ ಗ್ರಾಮದ ಆರೋಪಿಗಳಾದ ಯತೀಶ್ ಹಾಗೂ ಪ್ರಕಾಶ್ ದಾರಿ ತಡೆದು ಹಲ್ಲೆ ಮಾಡಿದ್ದಾರೆ.

ಗಿರೀಶ್ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಾ. 26 ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.