ಕೂಡಿಗೆ, ಸೆ. 4: ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿರುವ ಆದಿವಾಸಿಗಳ 30 ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡುಗೆ ಅನಿಲದ ಸಿಲಿಂಡರ್ ಮತ್ತು ಸ್ಟವ್‍ಗಳನ್ನು ವಿತರಿಸಲಾಯಿತು.

ಸಿಲಿಂಡರ್ ಮತ್ತು ಸ್ಟವ್‍ಗಳನ್ನು ಫಲಾನುಭವಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ವಿತರಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಸಹಕಾರ ಸಂಘದ ನಿರ್ದೇಶಕ, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ತಾಲೂಕು ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಬೊಮ್ಮಗೌಡನ ಚಿಣ್ಣಪ್ಪ, ಧನರಾಜ್, ಕೂಡಿಗೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಜಗದೀಶ್ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಬ್ಯಾಡಗೊಟ್ಟದ ಗ್ರಾಮಸ್ಥರು ಇದ್ದರು.