ವೀರಾಜಪೇಟೆ, ಸೆ. 4: ಜಲಪ್ರಳಯಕ್ಕೆ ತುತ್ತಾದ ಸಂತ್ರಸ್ತರಿಗೆ ವೀರಾಜಪೇಟೆ ಎಸ್.ಎನ್.ಡಿ.ಪಿ. ಶಾಖೆಯು ಪರಿಹಾರ ಧನ ಸಹಾಯ ನೀಡಿ ತಮ್ಮ ಉದಾರತೆಯನ್ನು ಮೆರೆಯಿತು.

ವೀರಾಜಪೇಟೆ ನಗರದ ಗೌರಿ ಕೆರೆ ರಸ್ತೆಯಲ್ಲಿರುವ ಎಸ್,ಎನ್.ಡಿ.ಪಿ ಶಾಖೆಯ ಕಚೇರಿಯಲ್ಲಿ ಶ್ರೀ ನಾರಾಯಣ ಗುರು ಜಯಂತಿಯು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿಕೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ವೀರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ ನಾರಾಯಣ ಅವರು ವಹಿಸಿದ್ದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೇರಳ ರಾಜ್ಯ ಮತ್ತು ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ನಿರ್ಗತಿಕರಾದರು. ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ಜಲ ಪ್ರಳಯವು ಸಂಭವಿಸಿ ಸುಂದರ ಕೊಡಗಿನ ಚಿತ್ರಣವೇ ಬದಲಾಗಿ ಹೋಗಿದೆ. ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಸೂರು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಹೀಗೆ ಕೊಡಗು ಕಣ್ಣೀರ ಕೋಡಿಯಲ್ಲಿ ಮುಳುಗಿರುವಾಗ ಜಯಂತಿ ಆಚರಣೆಯನ್ನು ಆಡಂಭರವಾಗಿ ಮಾಡುವದು ಸರಿಯಲ್ಲ ಆದುದರಿಂದ ಶಾಖೆಯ ಪ್ರಮುಖ ಹಾಗೂ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸರಳತೆಯಂತೆ ಶ್ರೀ ನಾರಾಯಣ ಗುರು ಜಯಂತಿ ಆಚರಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ರೂ. 50.000 ಹಣವನ್ನು ಶಾಖೆಯ ವತಿಯಿಂದ ಪ್ರಕೃತಿ ವಿಕೋಪ ನಿಧಿಗೆ, ಮಡಿಕೇರಿಯ ವಿಕಾಸ್ ಜನಾ ಸೇವಾ ಟ್ರಸ್ಟ್ ಸಂಸ್ಥೆಗೆ ರೂ. 10.000 ಮತ್ತು ಬಿಟ್ಟಂಗಾಲ ಗ್ರಾಮ ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣ ಗುರು ಮಂದಿರದ ಆಡಳಿತ ಮಂಡಳಿಗೆ ಕಿರು ಧನ ಸಹಾಯವನ್ನು ನೀಡಲಾಯಿತು. ಅಂಬಟ್ಟಿ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ಮೂರ್ತಿಗೆ ಮಾಲಾರ್ಪಣೆ ಮಾಡಿ ಪ್ರಸಾದ ವಿನಿಯೋಗ ನಡೆಯಿತು

ಶಾಖೆಯ ಉಪಾಧ್ಯಕ್ಷರಾದ ಪ್ರಭ, ಕಾರ್ಯದÀರ್ಶಿ ದಾಮೋಧರ್, ಹಿರಿಯರು ಮತ್ತು ಗುತ್ತಿಗೆದಾರ ಅಚ್ಚುಕುಟ್ಟಿ ಉಪಸ್ಥಿತರಿದ್ದರು

ಸಮಾರಂಭದಲ್ಲಿ ನಿರ್ದೇಶಕರಾದ ಅನಿಲ್ ಕುಮಾರ್, ಬಿ.ಎಂ. ಗಣೇಶ್, ಸಿ.ಅರ್. ಬಾಬು, ಪ್ರಸಾದ್ ಜನಾರ್ಧನ, ಕೆ.ವಿ. ಸಂತೋಷ್, ಟಿ.ಅರ್ ಗಣೇಶ್, ಉಪೇಂದ್ರ ಮತ್ತು ಶಾಖೆಯ ಸದಸ್ಯರುಗಳು ಹಾಜರಿದ್ದರು.