ವೀರಾಜಪೇಟೆ, ಸೆ. 4: ಕೊಡವ ಹಾಕಿ ಅಕಾಡೆಮಿಯ ಮೂಲಕ ಆಯೋಜಿಸುತ್ತಿರುವ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಈ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ 2019ರಲ್ಲಿ ನಡೆಸದಿರಲು ಕೊಡವ ಹಾಕಿ ಅಕಾಡೆಮಿ ತೀರ್ಮಾನಿಸಿದೆ.2019ರಲ್ಲಿ ಬಾಳುಗೋಡುವಿನಲ್ಲಿ ಮುಕ್ಕಾಟ್ಟಿರ (ಹರಿಹರ) ಕುಟುಂಬ ಹಾಕಿ ಪಂದ್ಯಾಟ ಆಯೋಜಿಸುವ ಜವಾಬ್ದಾರಿ ವಹಿಸಿಕೊಂಡಿತ್ತು. ಇದೀಗ ಮುಂದಿನ 2020ರಲ್ಲಿ ಬಾಳುಗೋಡುವಿನಲ್ಲಿ ಹಾಗೂ 2021ರಲ್ಲಿ ಆದೇಂಗಡ ಕುಟುಂಬ, ಬಾಳೆಲೆಯಲ್ಲಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೊಡವ ಹಾಕಿ ಅಕಾಡೆÀಮಿಯ ಪ್ರಕಟಣೆಯಲ್ಲಿ ತಿಳಿಸಿದೆ.