ನಾಪೆÉÇೀಕ್ಲು, ಸೆ. 4: ಸಮೀಪದ ಹಳೇ ತಾಲೂಕಿನ ಪಾಡಿಯಮ್ಮಂಡ ಕುಟುಂಬಸ್ಥರ ಐನ್ಮನೆಗೆ ಸುಮಾರು ರೂ. 4.50 ಲಕ್ಷ ವೆಚ್ಚದಲ್ಲಿ ಮರು ಕಾಯಕಲ್ಪ ನೀಡುವದರ ಮೂಲಕ ಕುಟುಂಬದ ಆಚಾರ-ವಿಚಾರ, ಪದ್ಧತಿಗಳನ್ನು ಉಳಿಸಿಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕುಟುಂಬದ ಪಟ್ಟೆದಾರ ಮುತ್ತಮ್ಮಯ್ಯ ಹೇಳಿದರು.
ಗುರು ಮನೆ ನೆಲ್ಲಕ್ಕಿಯಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಕೆಲವು ವರ್ಷಗಳಿಂದ ನಮ್ಮ ಐನ್ಮನೆಯು ಶಿಥಿಲಾವಸ್ಥೆಯಲ್ಲಿತ್ತು. ಗುರು ಕಾರೋಣರ ಹಾಗೂ ಕುಟುಂಬದ ದೈವಾನು ದೇವತೆಗಳನ್ನು ಪೂಜಿಸುವ ನಿಟ್ಟಿನಲ್ಲಿ ಕುಟುಂಬ ಸದಸ್ಯರ ಸಹಕಾರದೊಂದಿಗೆ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯ, ಪದ್ಧತಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಐನ್ಮನೆಯನ್ನು ರೂಪಿಸಲಾಗಿದೆ ಎಂದರು.
ಗುರುಮನೆಯಲ್ಲಿ 5 ವರ್ಷಕ್ಕೊಮ್ಮೆ ದೈವದ ಕೋಲ ನಡೆಸಲಾಗುತ್ತಿದೆ. ಇದರಲ್ಲಿ ಪಂಜುರುಳಿ, ಕೊರ್ತಿ, ಗುಳಿಗ, ಪಾಷಣಮೂರ್ತಿ, ಅಂಗಾರ ದೈವದÀ ಕೋಲವನ್ನು ನಡೆಸುತ್ತಾ ಬರಲಾಗುತ್ತಿದೆ. ಅಂತೆಯೇ ವಾರ್ಷಿಕವಾಗಿ ಮನೆಗುಳಿಗ ಮತ್ತಿತರ ದೈವಗಳಿಗೆ ಬಲಿ ಕಾರ್ಯಕ್ರಮ ಮತ್ತು ಅನ್ನದಾನ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಗಣಹೋಮ ಮತ್ತಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಕುಟುಂಬದ ಸದಸ್ಯರಾದ ಮೊಣ್ಣಮ್ಮಯ್ಯ (ಯೋಗಿಶ್), ಮಿಟ್ಟು, ಆನಂದ, ರವೀಂದ್ರ, ಜಾಲಿ, ಅರುಣ, ಪ್ರೇಮ್ ಕುಮಾರ್, ದೀಪು, ಮಂಜುನಾಥ ಮತ್ತಿತರರು ಪಾಲ್ಗೊಂಡಿದ್ದರು.