ಮಡಿಕೇರಿ, ಸೆ.4: ಮಡಿಕೇರಿ ನಗರದಲ್ಲಿ ವಾಹನ ಚಾಲನೆ ಹೋಗಲಿ, ನಡೆಯಲೂ ಆಸಾಧ್ಯವಾದಷ್ಟು ರಸ್ತೆಗಳು ಕಿತ್ತು ಹೋಗಿವೆ. ಒಂದೆಡೆ ಒಳಚರಂಡಿ ಯೋಜನೆಯ ಕೆಲಸ 5 ಪ್ರದೇಶಗಳಲ್ಲಿ ಮಳೆಯಿಂದ ಕುಸಿದು ಹಾಳಾಗಿದೆ. ಇನ್ನೊಂದೆಡೆ ಭೂ ಕುಸಿತಗೊಂಡ ಪ್ರದೇಶಗಳÀಲ್ಲಿ ಮತ್ತೆ ಕುಸಿತದ ಆತಂಕ ಮೂಡಿದೆ. ಈಗ ಸಮರೋಪಾದಿ ಕೆಲಸ ಆಗಬೇಕಿದ್ದು ಈ ಬಗ್ಗೆ “ಶಕ್ತಿ” ಗಮನಕ್ಕೆ ತಂದಾಗ ನಗರ ಸಭಾ ಆಡಳಿತ ಮಂಡಳಿ ಪ್ರಮುಖರು ಸ್ಥಳಕ್ಕೆ ಭೇಟಿಯಿತ್ತು ಸ್ಪಂದಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಅಪಾಯದ ಸೂಚನೆಯಿರುವದನ್ನು ಮನಗಂಡು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಡಿಕೇರಿ ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಹೆಚ್.ಎಂ. ನಂದಕುಮಾರ್,ಆಡಳಿತ ಪಕ್ಷದ ಸದಸ್ಯರಾಗಿರುವ ಪ್ರಕಾಶ್ ಆಚಾರ್ಯ ಭರವಸೆಯಿತ್ತರು. ಮಳೆ ಹಾನಿ ಪ್ರದೇಶಗಳÀಲ್ಲಿ ಕಾನೂನು ಕಟ್ಟಳೆ ಎಂದು ಪರಿಗಣಿಸದೆ ತಕ್ಷಣವೇ ಕಾಮಗಾರಿ ನಡೆಸುವ ಬಗ್ಗೆ ನಂದಕುಮಾರ್ ಇಂಗಿತ ವ್ಯಕ್ತಪಡಿಸಿದರು. ಇದು ಅಳಿವು ಉಳಿವಿನ ಪ್ರಶ್ನೆ ಎಂಬ ಕುರಿತು ಅಭಿಪ್ರಾಯ ವ್ಯಕ್ತಗೊಂಡಿತು.

ಖಾಸಗಿ ಬಸ್ ನಿಲ್ದಾಣದ ಕಟ್ಟಡ ತೆರವುಗೊಳಿಸಿದರೂ ಅಪಾಯ ಸ್ಥಿತಿಯಲ್ಲಿರುವ ಅದನ್ನು ಬೀಳಿಸದಿರುವ ಬಗ್ಗೆ ಗಮನಕ್ಕೆ ತಂದಾಗ ಶೀಘ್ರ ಈ ಕಾರ್ಯ ನಡೆಸುವದಾಗಿ ತಿಳಿಸಿದರು. ಮತ್ತೊಂದೆಡೆ ನೂತನ ಬಸ್ ನಿಲ್ದಾಣಕ್ಕೆ ಬಸ್‍ಗಳ ಸ್ಥಳಾಂತರÀಗೊಂಡಿದ್ದರೂ ಪ್ರಯಾಣಿಕರಿಗೆ ಅಗತ್ಯವಾದ ಅನುಕೂಲ ಒದಗಿಸಿಲ್ಲ. ಬಸ್ ನಿಲ್ದಾಣದಲ್ಲಿ ಶೌÀಚಾಲಯವಿದ್ದರೂ ಬೀಗ ಜಡಿಯಲಾಗಿದೆ. ಪ್ರಯಾಣಿಕರು ಕುಳಿತುಕೊಳ್ಳಲು ಯಾವದೇ ಆಸನ ವ್ಯವಸ್ಥೆ ಕಲ್ಪಿಸಿಲ್ಲ, ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆಯೂ ಅಲ್ಲಿಲ್ಲ- ಈ ಬಗ್ಗೆ ಬಸ್ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡ ಕುರಿತು “ಶಕ್ತಿ” ಪ್ರತಿನಿಧಿ ಗಮನಕ್ಕೆ ತಂದಾಗ ತುರ್ತಾಗಿ ಈ ಸಮಸ್ಯೆಗಳನ್ನು ಬಗೆಹರಿಸುವದಾಗಿ ಅಧ್ಯಕ್ಷರು ಮತ್ತು ಸದಸ್ಯರು ಭರವಸೆಯಿತ್ತರು.

ಮೊದಲೇ ಪ್ರಚಾರವಿಲ್ಲದೆ ಈ ನೂತÀನ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬೆರಳೆಣಿಕೆ ಮಂದಿ ಬರುತ್ತಿದ್ದಾರೆ. ಹಳೆಯ ಬಸ್ ನಿಲ್ದಾಣದ ಬಳಿ ಕೇವಲ 5 ನಿಮಿಷ ಮಾತ್ರ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ, ಮೇಕೇರಿ ಮಾದಾಪುರ ಮೊದಲಾದೆಡೆ ತೆರಳಬೇಕಾದರೆ ಅಲ್ಲಿವರೆಗೆ ಒಂದು ಬಸ್ ತೆರಳಿದರೆ ರಸ್ತೆ ಇಬ್ಭಾಗವಾದ ಕಡೆ ಆ ಕಡೆಯಿಂದ ಮತ್ತೊಂದು ಬಸ್‍ನಲ್ಲಿ ಪ್ರಯಾಣಿಕರನ್ನು ಸಂಪರ್ಕ ಕಲ್ಪಿಸಿ ಒಯ್ಯಲಾಗುತ್ತಿದೆ ಎಂದು ಬಸ್ ಸಿಬ್ಬಂದಿ ವಿವರಿಸಿದರು. ಈಗಿನ ಪರಿಸ್ಥಿತಿಯಲ್ಲಿ ಸುಮಾರು 3,500 ಬಸ್ ಸಿಬ್ಬಂದಿಯ ಭವಿಷ್ಯ ಅತಂತ್ರವಾಗುವಷ್ಟು ವ್ಯವಸ್ಥೆಯ ಕೊರತೆ ಕಂಡುಬಂದಿದೆ ಎಂದು ಸಿಬ್ಬಂದಿ ನೋವಿನ ನುಡಿಯಾಡಿದರು..

ಈ ನಡುವೆ ಜಿಲ್ಲಾ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ್ಪ ಅವರ ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿರುವದು “ಶಕ್ತಿ”ಯ ಗಮನಕ್ಕೆ ಬಂದಿದೆ. ಮಳೆ ಹಾನಿಯಿಂದಾದ ಸಂಕಷ್ಟದಲ್ಲಿ (ಮೊದಲ ಪುಟದಿಂದ) ಸಿಲುಕಿ ಬಸ್ ಮಾಲೀಕರು ತೊಂದರೆಗೆ ಒಳಗಾಗಿದ್ದಾರೆ. ಬಸ್‍ಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೋರಿ ನಿಯೋಗ ತೆರಳಿರುವದಾಗಿ ರಮೇಶ್ “ಶಕ್ತಿ” ಗೆ ತಿಳಿಸಿದರು.

ನಗರದಲ್ಲಿನ ಅನಾಹುತ ವೀಕ್ಷಣೆ

ಈ ನಡುವೆ ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಆಡಳಿತ ಮಂಡಳಿ ಸದಸ್ಯರುಗಳಾದ ಹೆಚ್.ಎಂ. ನÀಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ಇವರುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಭವಿಸಿದ್ದ ಭೂಕುಸಿತ ಸ್ಥಳಗಳಿಗೆ ಭೇಟಿಯಿತ್ತರು.

ಮಡಿಕೇರಿ ನಗರದ ಕೊಹಿನೂರು ರಸ್ತೆÀ್ತಯಲ್ಲಿ ಹಾಗೂ ಕೈಗಾರಿಕಾ ಬಡಾವಣೆ ಮುಂಭಾಗ ಬಿದ್ದ ಬರೆಗಳು, ಹಾಗೂ ಜೊತೆಗೆ ಪ್ರವಾಹದಿಂದಾಗಿ ವಿವಿಧ ಉದ್ಯಮಿಗಳು ಕಷ್ಟ ನಷ್ಟಕ್ಕೆ ಒಳಗಾಗಿದ್ದಾರೆ. ಈಗಲೂ ಆ ಪ್ರದೇಶಗಳಿಗೆ ತೆರಳಿ ವೀಕ್ಷಿಸಿದಾಗ ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವದು ಕಂಡುಬಂದಿತು. ಕೊಹಿನೂರು ರಸ್ತೆಯಲ್ಲಿ ಉದ್ಯಮಿ ಐತಪ್ಪ ರೈ ಮತ್ತಿತರರು ಖಾಸಗಿಯಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡಿರುವದು ಕಂಡುಬಂದಿತು. ಈ ದಿಸೆಯಲ್ಲಿ ನಗರಸಭೆಯಿಂದ ಎಲ್ಲ ರೀತಿಯ ಕಾನೂನಾತ್ಮಕ ಸಹಕಾರ ನೀಡುವದಾಗಿ ಅಧ್ಯಕ್ಷರು ಭರವಸೆಯಿತ್ತರು. ಕೈಗಾರಿಕಾ ಬಡಾವಣೆಗೆ ನೀರು ನುಗ್ಗಿ ಹಾನಿಯಾಗಲು ಹೊಸ ಬಡಾವಣೆಯ ಕ್ರಾಸ್ ರಸ್ತೆಯಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ವಾಹನ ತೆರಳಲು ನೀರು ಹರಿಯುವ ಚರಂಡಿಯನ್ನು ಮುಚ್ಚಿದುದರಿಂದ ನೀರು ಮೇಲ್ಭಾಗಕ್ಕೆ ಹರಿದು ಕೆಳಗೆ ಮಣ್ಣು ಸಹಿತ ಜಾರಿ ಕೆಳ ಭಾಗದಲ್ಲಿರುವ ರಾಜ ಕಾಲುವೆ (ತೋಡು) ಗೆ ಸೇರಿ ಅಲ್ಲಿಂದ ಪ್ರವಾಹದೋಪಾದಿ ನೀರು ಕೈಗಾರಿಕಾ ಬಡಾವಣೆಯ ಸುತ್ತಲಿನ ರಸ್ತೆಗೆ ಚಲಿಸಿ ಇಡೀ ಪ್ರದೇಶ ಜಲಾವೃತಗೊಂಡ ಕುರಿತು ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರಲಾಯಿತು. ಕೈಗಾರಿಕಾ ಘಟಕಗಳಿಗೆ ನುಗ್ಗಿದ ಜಲಪ್ರವಾಹ ತೀವ್ರ ಹಾನಿ ಮಾಡಿರುವದನ್ನು ತಿಳಿಸಲಾಯಿತು. ಇನ್ನೂ ಕೂಡ ಅರಣ್ಯ ಕಚೇರಿಯ ಸನಿಹದ ಕಿರು ರಸ್ತೆಯಲ್ಲಿ ಎಲ್ಲೆಲ್ಲಿಂದಲೋ ತಂದು ಹಾಕಿರುವ ಮಣ್ಣು ಬದಿಯಲ್ಲಿ ತುಂಬಿದ್ದು ಇದನ್ನು ತೆಗೆದು ಬರೆಗಳನ್ನು ಸರಿಪಡಿಸದಿದ್ದರೆ ಮತ್ತೆ ಅನಾಹುತ ಖಚಿತ ಎಂಬದು ನಗರಸಭಾ ಪ್ರಮುಖರಿಗೆ ಮನವರಿಕೆಯಾಯಿತು. ಅಲ್ಲದೆ ಕೆಳಭಾಗದಲ್ಲಿ ಯಾವ ರೀತಿ ತಡೆಗೋಡೆ ನಿರ್ಮಿಸಬಹುದು, ಮುಂದೆ ಅನಾಹುತಗಳಾಗದಂತೆ ತಡೆಗಟ್ಟಬಹುದು ಎಂಬ ಕುರಿತು ಚರ್ಚಿಸಿ ಕಾರ್ಯೋನ್ಮುಖರಾಗುವದಾಗಿ ಅಧ್ಯಕ್ಷರು ಮತ್ತು ಸದಸ್ಯರು ಖಚಿತಪಡಿಸಿದರು. ಈಗ ಹಂಗಾಮಿ ಆಯುಕ್ತರಿದ್ದು ಸದ್ಯದಲ್ಲಿಯೇ ನೂತನ ಆಯುಕ್ತರು ಆಗಮಿಸಲಿದ್ದು ಬಳಿಕ ಸೂಕ್ತ ಪರಿಹಾರ ಕಾಮಗಾರಿ ಕೈಗೊಳ್ಳುವದಾಗಿ ನಂದಕುಮಾರ್ “ಶಕಿ”್ತಯೊಂದಿಗೆ ನುಡಿದರು. ಈ ವಿಭಾಗದಲ್ಲಿ ಒಳಚರಂಡಿಗೆ ನಡೆದ ಕೆಲಸದಲ್ಲಿ ಬಳಸಲಾಗಿದ್ದ ಎಲ್ಲ ಪೈಪ್ ಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವದು ಕಂಡುಬಂದಿದೆ.

ಒಳಚರಂಡಿ: 5 ಕಡೆ ಹಾನಿ

ರಸ್ತೆ ದುರಸ್ತಿಗೆ ಕ್ರಮ

ಪ್ರಸಕ್ತ ಅತಿವೃಷ್ಟಿಯಿಂದಾಗಿ ಮಡಿಕೇರಿ ನಗರದಲ್ಲಿ ಒಳ ಚರಂಡಿ (ಯುಜಿಡಿ) ಸಂಬಂಧ ನಡೆÀದಿರುವ ಕೆಲಸಗಳ ಪೈಕಿ ಐದು ಸ್ಥಳಗಳಲ್ಲಿ ತೀವ್ರ ಹಾನಿಗೀಡಾಗಿವೆ ಎಂದು ಕೆಯುಡಬ್ಲ್ಯುಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನಕುಮಾರ್ “ಶಕ್ತಿ” ಗೆ ಮಾಹಿತಿಯಿತ್ತರು. ಈ ಸ್ಥಳಗಳÀಲ್ಲಿ ದುರಸ್ತಿ ಕೆಲಸ ನಡೆದ ಬಳಿಕವಷ್ಟೆ ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು ಎಂದು ತಿಳಿಸಿದರು. ವಿದ್ಯಾನಗರ, ಸಂಪಿಗೆ ಕಟ್ಟೆ, ಅಬ್ಬಿಫಾಲ್ಸ್ ರಸ್ತೆ, ಕನ್ನಿಕ ಲೇಔಟ್ ಹಾಗೂ ಟಿವಿ-1 ಕಚೇರಿ ಬಳಿ ಹಾನಿಗೀಡಾಗಿದ್ದು ಈ ಸ್ಥಳಗಳಲ್ಲಿ ಪೂರ್ಣ ದುರಸ್ತಿ ನಡೆಯಬೇಕಿದೆ ಎಂದರು.

ಈಗ ಸದ್ಯಕ್ಕೆ 65 ಕಿ.ಮೀ ರಸ್ತೆಯಲ್ಲಿ ಕೆಲಸ ಪೂರ್ಣಗೊಂಡಿದೆ. ಇನ್ನೂ 28 ಕಿ.ಮೀ ರಸ್ತೆಯಲ್ಲಿ ಕೆಲಸ ಮುಂದುವರಿಸಬೇಕಿದೆ. ಆದರೆ, ಕಾಂಕ್ರಿಟ್ ರಸ್ತೆಗಳಲ್ಲಿ ಕಾಮಗಾರಿ ನಡೆಸಬಾರದೆಂದು ನಗರಸಭೆ ಸೂಚಿಸಿದ್ದು ಅಲ್ಲಿ ಕೆಲಸ ನಿರ್ವಹಿಸುವದಿಲ್ಲ. ಕಾಂಕ್ರಿಟ್ ರಸ್ತೆಗಳು ಬಾಕಿಯಾಗುತ್ತವೆ. ಸದ್ಯದ ಮಟ್ಟಿಗೆ ಸೆಪ್ಟಿಕ್ ಟ್ಯಾಂಕ್‍ಗೆ ಸಂಬಂಧಿಸಿದ ಕೆಲಸ ಕೈಗೊಳ್ಳುವದಿಲ್ಲ. ಶೌಚಾಲಯಗಳ ಕೊಳಚೆ ನೀರನ್ನು ಹರಿಸಿ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ನಗರದ ನಾಲೆಗೆ ಬಿಡಲಾಗುತ್ತದೆ. ಈಗಾಗಲೇ ಶುದ್ಧೀಕರಣ ಘಟಕ ಸ್ಥಾಪನೆಗೆ ಸೂಕ್ತ ನಿವೇಶನ ದೊರೆತಿದ್ದು ಘಟಕ ಸ್ಥಾಪನೆಗೆ ಟೆಂಡರ್ ಕರೆಯಲಾಗುತ್ತದೆ ಎಂದು ತಿಳಿಸಿದರು.

ಮಡಿಕೇರಿ ರಸ್ತೆ ದುರವಸ್ಥೆ ಬಗ್ಗೆ ಪ್ರಶ್ನಿಸಿದಾಗ ದಸರಾಕ್ಕೂ ಮುನ್ನ 4.5 ಕಿ,ಮೀ ರಸ್ತÉ್ತ ದುರಸ್ತಿಗೊಳಿಸುವದಾಗಿ ಪ್ರಸನ್ನಕುಮಾರ್ ಮಾಹಿತಿಯಿತ್ತರು.