ಮಡಿಕೇರಿ, ಸೆ. 4: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ಶಿಪ್ನಲ್ಲಿ ಮರ್ಕರ ಟೆಕ್ವಾಂಡೊ ಕ್ಲಬ್ನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ಬಿ.ಆರ್. ಯಜ್ಞ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮರ್ಕರ ಟೆಕ್ವಾಂಡೊ ಕ್ಲಬ್ನ ವಿದ್ಯಾರ್ಥಿಗಳಾದ ನಮನ್ ಬೆಳ್ಳಿಯಪ್ಪ, ನಿಕೇಶ್, ಮೃದುಲ್, ಸೊಹನ್, ಯು.ಡಿ. ಮೋನಿಶ್, ಯಜ್ಞ, ಕುಂಗಾವೆಂಗ್ಪೊ, ಕುಂಗಾಥನ್ದೆನ್, ಸುಂಗಾ ನೈಮ, ಅಶಿಶ್, ಪ್ರತೀಪ್, ನವೆಂಗ್ ಇವರುಗಳು ಸ್ಪರ್ಧಿಸಿದ್ದರು. ಇವರು ಕ್ಲಬ್ನ ತರಬೇತುದಾರÀ ಕುಶಾಲ್ ಹಾಗೂ ಕಿಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.