ಸುಂಟಿಕೊಪ್ಪ, ಸೆ. 4: ಡಾ. ಶಿವಮೂರ್ತಿ ಶರಗೂರು ಅವರು ನಿರಾಶ್ರಿತರ ಆಹವಾಲು ಆಲಿಸಿ ಅವರಿಗೆ ಸಾಂತ್ವನ ಹೇಳಿದರು.

ನಿರಾಶ್ರಿತರಿಗೆ ಸರ್ಕಾರ ಮತ್ತು ನಾಡಿನ ಜನತೆ ಸಹಾಯ ಹಸ್ತ ಚಾಚಿದ್ದು ನಿರಾಶ್ರಿತರು ಯಾವದೇ ಅತಂಕಕ್ಕೆ ಒಳಗಾಗಬಾರದು ಎಂದರು. ನಿರಾಶ್ರಿತ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ನಮ್ಮ ಸಂಸ್ಥಾನದ ವತಿಯಿಂದ ಬೇಕಾದ ಸವಲತ್ತುಗಳನ್ನು ಉಚಿತ ಶಿಕ್ಷಣವನ್ನು ನೀಡಲು ಸಿದ್ಧವಿರುವದಾಗಿ ಅವರು ನುಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಪರಿಷತ್ತಿನ ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ, ಮುಖಂಡರಾದ ಶಿವಪ್ಪ, ಎಚ್.ವಿ.ಶಿವಪ್ಪ, ಟಿ.ಎಸ್.ಶಾಂಭಾಮೂರ್ತಿ, ಎಚ್.ಪಿ.ಉದಯಕುಮಾರ್, ನಿರಾಶ್ರಿತ ಶಿಬಿರದ ನೋಡಲ್ ಅಧಿಕಾರಿಗಳಾದ ಸಿ.ಆರ್. ನಾಗರಾಜಯ್ಯ, ಪಾಂಡು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಇತರರು ಇದ್ದರು.

ಇದೇ ವೇಳೆ ಸ್ವಾಮೀಜಿ ಅವರು ನಿರಾಶ್ರಿತರಿಗೆ ವಸ್ತುಗಳನ್ನು ನೀಡಿದರು.