ಸುಂಟಿಕೊಪ್ಪ, ಸೆ. 6: ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾರ್ ತಿದ್ದುಪಡಿ ಕೇಂದಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಚಾಲನೆ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಆಧಾರ್ ತಿದ್ದುಪಡಿ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿ, ಸುಂಟಿಕೊಪ್ಪ ವ್ಯಾಪ್ತಿಯ ಜನತೆಗೆ ಆಧಾರ್ ಕಾರ್ಡ್ ಯಾವದೇ ರೀತಿಯ ಲೋಪಗಳು ಸಮಸ್ಯೆಗಳು ಇದ್ದಲ್ಲಿ ಅದನ್ನು ಗ್ರಾಮಸ್ಥರು ಇನ್ನಿತರ ಕಚೇರಿಗಳಿಗೆ ತೆರಳದೆ ನೇರವಾಗಿ ಪಂಚಾಯಿತಿ ಕಚೇರಿಗೆ ತಪ್ಪುಗಳನ್ನು ತಿದ್ದುಪಡಿಗೊಳಸಬಹುದಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಸದಸ್ಯರುಗಳಾದ ಸಿ. ಚಂದ್ರ, ಎ. ಶ್ರೀಧರ್ ಕುಮಾರ್, ಶಿವಮ್ಮ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.