ಮಡಿಕೇರಿ, ಸೆ. 5: ಜಿಲ್ಲೆಯಲ್ಲಿ ಈ ಬಾರಿ ಘನಘೋರ ಮಳೆಯಿಂದ ಫಸಲು ನಾಶವಾಗಿ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ. ಇದು ಅವರ ಬದುಕಿನ ಪ್ರಶ್ನೆಯಾಗಿದ್ದು, ಸಹಕಾರ ಸಂಘಗಳ ಅಭಿವೃದ್ಧಿಗೂ ಮಾರಕವಾಗಿದೆ. ನಿರಖು ಠೇವಣಿ ಹೂಡಿರುವ ರೈತರಿಗೆ ಸಾಲಮನ್ನಾ ಆದೇಶಗಳು ಅನ್ವಯಿಸದಿರುವದರಿಂದ ರೈತರು ಠೇವಣಿಗಳನ್ನು ಹಿಂಪಡೆದರೆ ಸಂಘಗಳ ಏಳಿಗೆಗೆ ಧಕ್ಕೆಯುಂಟಾಗುತ್ತದೆ.

ಈ ಹಿನ್ನೆಲೆಯಲ್ಲಿ ತಾ. 6 ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪಿಕಾರ್ಡ್ ಬ್ಯಾಂಕ್‍ಗಳ ಅಧ್ಯಕ್ಷರುಗಳಿಗೆ ಸಾಲಮನ್ನಾ ಕುರಿತು ಸಭೆ ಕರೆಯಲಾಗಿದೆ.