ಮಡಿಕೇರಿ, ಸೆ. 5: ಹಾಲೇರಿ ನಿವಾಸಿ ಬಿಜ್ಜಂಡ ಗಣಪತಿ (80) ಎಂಬವರು ಆ. 29 ರಂದು ಇಲ್ಲಿನ ಮುತ್ತಪ್ಪ ದೇವಾಲಯ ಬಳಿ ಬಿ.ಜಿ. ರಮೇಶ್ ಮನೆಯಿಂದ ಕಾಣೆಯಾಗಿದ್ದು, ಇಂದು ಕೆದಕಲ್ ಬಳಿಯ ಕುಪ್ಪೆ ಹೊಳೆಯಲ್ಲಿ ಶವ ಪತ್ತೆಯಾಗಿದೆ. ನಿವೃತ್ತ ಶಿಕ್ಷಕರಾಗಿದ್ದ ಮೃತರು ಆಕಸ್ಮಿಕ ಕಾಲುಜಾರಿ ಸಾವನ್ನಪ್ಪಿರುವದಾಗಿ ಪುತ್ರ ರಮೇಶ್ ಪೊಲೀಸರಿಗೆ ಹೇಳಿಕೆ ನೀಡಿದ ಮೇರೆಗೆ ಮುಂದಿನ ಕ್ರಮಕೈಗೊಳ್ಳಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುತ್ತಪ್ಪ ದೇವಾಲಯ ಬಳಿಯ ನಿವಾಸದಲ್ಲಿ ಅಂತ್ಯಕ್ರಿಯೆಯೊಂದಿಗೆ, ಕೊಡವ ಸಮಾಜದ ರುದ್ರ ಭೂಮಿಯಲ್ಲಿ ತಾ. 6 ರಂದು (ಇಂದು) ಅಂತ್ಯ ಸಂಸ್ಕಾರ ನಡೆಸಲಾಗುವದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.