ಸಿದ್ದಾಪುರ, ಸೆ. 6: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯ ಸ್ಟಾರ್ ಹೇರ್ ಡ್ರೆಸ್ಸೆಸ್ ಮತ್ತು ಕೂರ್ಗ್ ಹೇರ್ ಡ್ರೆಸ್ಸಸ್ ಕ್ಷೌರದ ಅಂಗಡಿಯ ಮಾಲೀಕರು ಹಾಗೂ ಸಿಬ್ಬಂದಿಗಳು ಮಡಿಕೇರಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ತೆರಳಿ ನಿರಾಶ್ರಿತರ ತಲೆ ಮತ್ತು ಗಡ್ಡವನ್ನು ಕ್ಷೌರ ಮಾಡಿ ಮಾನವೀಯತೆ ಮೆರೆದರು. ಈ ಸಂದರ್ಭ ದೊರೇಶ್, ದಿನೇಶ್, ಪುನಿತ್, ಸ್ವಾಮಿ, ಕುಮಾರ್ ಮತ್ತಿತರರು ಹಾಜರಿದ್ದರು.