ಸೋಮವಾರಪೇಟೆ, ಸೆ. 6: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಯಲ್ಲಿ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ ಕೆ.ಆರ್. ಹರ್ಷಿತ ಪ್ರಥಮ ಸ್ಥಾನ ಪಡೆದಿದ್ದಾರೆ.
ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢÀಶಾಲಾ ವಿದ್ಯಾರ್ಥಿ ಎಂ. ವಿಘ್ನೇಶ್ ದ್ವಿತೀಯ ಹಾಗೂ ಅಂಕನಹಳ್ಳಿ ಸರಕಾರಿ ಪ್ರೌಢÀಶಾಲೆಯ ವಿದ್ಯಾರ್ಥಿ ನವೀನ್ ತೃತೀಯ ಸ್ಥಾನ ಪಡೆದಿದ್ದಾರೆ.
ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬೆಸೂರು ಸರಕಾರಿ ಪ್ರೌಢÀಶಾಲೆ ಪ್ರಥಮ, ಕೊಡ್ಲಿಪೇಟೆ ಸರಕಾರಿ ಪ್ರೌಢÀಶಾಲೆ ದ್ವಿತೀಯ ಮತ್ತು ತೊರೆನೂರು ಸರಕಾರಿ ಪ್ರೌಢÀಶಾಲೆ ತೃತೀಯ ಸ್ಥಾನಗಳಿಸಿದೆ.