.

ಮಡಿಕೇರಿ, ಸೆ. 6: ಮಡಿಕೇರಿ ಕೊಡವ ಸಮಾಜದ ಕಲ್ಚರಲ್ ಮತ್ತು ಸೋಷಿಯಲ್ ವೆಲ್‍ಫೇರ್ ಸೆಂಟರ್‍ನ ವಾರ್ಷಿಕ ಮಹಾಸಭೆ ತಾ. 9 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸೆಂಟರ್‍ನ ಅಧ್ಯಕ್ಷ ಮುಂಡಂಡ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅವಿರೋಧ ಆಯ್ಕೆ

ಈ ಬಾರಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಿದ್ದು, ಎಲ್ಲಾ 15 ನಿರ್ದೇಶಕ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಬಲ್ಯಂಡ ನಂಜಪ್ಪ ಅವರು ತಿಳಿಸಿದ್ದಾರೆ.