ಮಡಿಕೇರಿ, ಸೆ. 6: ಮಡಿಕೇರಿ ನಗರಸಭೆಯ ನೂತನ ಆಯುಕ್ತರನ್ನಾಗಿ ಎಂ.ಎಲ್. ರಮೇಶ್ ಎಂಬವರನ್ನು ಸರಕಾರ ಇದೀಗ ನೇಮಿಸಿದೆ. ಹೆಚ್.ಡಿ. ಕೋಟೆಯಲ್ಲಿ ಪುರಸಭಾ ಮುಖ್ಯಾಧಿಕಾರಿಯಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ಸ್ವಂತ ವೇತನ ಶ್ರೇಣಿಯ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನೇಮಿಸಿರುವದಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಂಪನಗೌಡ ಮೇಲ್ಸೀಮೆಯವರು ಪ್ರಕಟಿಸಿದ್ದಾರೆ.