ಮಡಿಕೇರಿ, ಸೆ. 6: ಜಿಲ್ಲೆಯಲ್ಲಿ ಮಹಾ ಮಳೆಯಿಂದ ಸಂಭವಿಸಿದ ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿ, ಪಾಸ್ತಿಗಳ ನಷ್ಟದ ಕುರಿತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿದ ಜಮಾಅತ್ ಇಸ್ಲಾಮಿ ಹಿಂದ್‍ನ ಸಮಾಜ ಸೇವಾ ವಿಭಾಗವಾದ ಹ್ಯೂಮ್ಯಾನಿಟ್ಯಾರಿಯನ್ ರಿಲೀಫ್ ಸೊಸೈಟಿಯ ಪದಾಧಿಕಾರಿಗಳು ಪರಿಹಾರ ಕಾರ್ಯಗಳ ಕುರಿತು ಚರ್ಚಿಸಿದರು. ಜಿಲ್ಲಾಡಳಿತ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಮುಖರು ಕೆಲವು ಸಲಹೆಗಳನ್ನು ಮನವಿ ಪತ್ರದ ಮೂಲಕ ನೀಡಿದರು. ಹೆಚ್.ಆರ್.ಎಸ್. ತಂಡದಲ್ಲಿ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಮರ್ಕಡ, ವಲಯ ಮೇಲ್ವಿಚಾರಕ ಯು.ಅಬ್ದುಲ್ ಸಲಾಂ, ಜಿಲ್ಲಾ ಸಂಚಾಲಕ ಸಿ.ಹೆಚ್. ಅಪ್ಸರ್, ಪಿ.ಕೆ. ಅಬ್ದುಲ್ ರೆಹಮಾನ್, ಜಿ.ಹೆಚ್. ಮಹಮ್ಮದ್ ಹನೀಫ್, ಎಂ.ಎಂ. ಅಬ್ದುಲ್ಲಾ ಮತ್ತಿತರರು ಹಾಜರಿದ್ದರು.