ಮಡಿಕೇರಿ, ಸೆ. 5: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗದ ಅಲ್ಲಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿದ್ದ ಆತಂಕದ ಛಾಯೆಯು, ವರುಣನ ಮುನಿಸನ್ನು ಶಮನಗೊಳಿಸುವಲ್ಲಿ ಮೂರು ದಿನಗಳಿಂದ ಎದುರಾಗಿರುವ ‘ಉದಯರವಿ’ಯಿಂದ ಸ್ವಲ್ಪ ಮಟ್ಟಿಗೆ ದೂರವಾದಂತಿದೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ - ಸಂಪಾಜೆ ನಡುವೆ ಹೆದ್ದಾರಿ ಸಂಪರ್ಕಕಕ್ಕೆ ತೊಡಕಾಗಿದ್ದು, ಮಡಿಕೇರಿ, ಸಕಲೇಶಪುರ ನಡುವೆ ಹಾಲೇರಿ ಬಳಿ ಮಾರ್ಗ ಸಂಚಾರಕ್ಕೆ ಅಸಾಧ್ಯವಾಗಿದೆ. ಹಟ್ಟಿಹೊಳೆ - ಹಮ್ಮಿಯಾಲ ಮಾರ್ಗದಲ್ಲೂ ಸದ್ಯದಮಟ್ಟಿಗೆ ವಾಹನಗಳ ಓಡಾಟಕ್ಕೆ ಅಸಾಧ್ಯವೆನಿಸಿದೆ. ಇನ್ನು ಮಾದಾಪುರ-ಗರ್ವಾಲೆ ನಡುವೆ ಒಂದೆರಡು ದಿನಗಳಲ್ಲಿ ರಸ್ತೆ ಸಂಪರ್ಕ ಸಾಧ್ಯವಾಗಲಿದ್ದು, ಹಾಲೇರಿ - ಹಟ್ಟಿಹೊಳೆ ಮತ್ತು ಕಾಂಡನಕೊಲ್ಲಿ - ಕೆದಕಲ್ ಸಂಪರ್ಕ ಮಾರ್ಗ ಸಾಧ್ಯವೇ ಇಲ್ಲದಂತಹ ದೃಶ್ಯ ಗೋಚರಿಸಿದೆ.ಸ್ಮಶಾನ ಮೌನ : ಮುಖ್ಯವಾಗಿ ಮಡಿಕೇರಿ, ಸೆ. 5: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗದ ಅಲ್ಲಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿದ್ದ ಆತಂಕದ ಛಾಯೆಯು, ವರುಣನ ಮುನಿಸನ್ನು ಶಮನಗೊಳಿಸುವಲ್ಲಿ ಮೂರು ದಿನಗಳಿಂದ ಎದುರಾಗಿರುವ ‘ಉದಯರವಿ’ಯಿಂದ ಸ್ವಲ್ಪ ಮಟ್ಟಿಗೆ ದೂರವಾದಂತಿದೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ - ಸಂಪಾಜೆ ನಡುವೆ ಹೆದ್ದಾರಿ ಸಂಪರ್ಕಕಕ್ಕೆ ತೊಡಕಾಗಿದ್ದು, ಮಡಿಕೇರಿ, ಸಕಲೇಶಪುರ ನಡುವೆ ಹಾಲೇರಿ ಬಳಿ ಮಾರ್ಗ ಸಂಚಾರಕ್ಕೆ ಅಸಾಧ್ಯವಾಗಿದೆ. ಹಟ್ಟಿಹೊಳೆ - ಹಮ್ಮಿಯಾಲ ಮಾರ್ಗದಲ್ಲೂ ಸದ್ಯದಮಟ್ಟಿಗೆ ವಾಹನಗಳ ಓಡಾಟಕ್ಕೆ ಅಸಾಧ್ಯವೆನಿಸಿದೆ. ಇನ್ನು ಮಾದಾಪುರ-ಗರ್ವಾಲೆ ನಡುವೆ ಒಂದೆರಡು ದಿನಗಳಲ್ಲಿ ರಸ್ತೆ ಸಂಪರ್ಕ ಸಾಧ್ಯವಾಗಲಿದ್ದು, ಹಾಲೇರಿ - ಹಟ್ಟಿಹೊಳೆ ಮತ್ತು ಕಾಂಡನಕೊಲ್ಲಿ - ಕೆದಕಲ್ ಸಂಪರ್ಕ ಮಾರ್ಗ ಸಾಧ್ಯವೇ ಇಲ್ಲದಂತಹ ದೃಶ್ಯ ಗೋಚರಿಸಿದೆ.
ಸ್ಮಶಾನ ಮೌನ : ಮುಖ್ಯವಾಗಿ ತೀವ್ರ ಆತಂಕ ಹಾಗೂ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.
ವಿವಿಧೆಡೆಗಳಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದ ಸಾಕಷ್ಟು ಮಂದಿ, ಇದೀಗ ಕಾಣಿಸಿಕೊಂಡಿರುವ ಬಿಸಿಲಿನ ನಡುವೆ ತಮ್ಮ ತಮ್ಮ ಮನೆಗಳಿಗೆ ಹಿಂತಿರು ಗುತ್ತಿರುವ ದೃಶ್ಯ ಗೋಚರಿಸಿದೆ. ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿರುವ ಮಂದಿ, ಅಪಾಯದ ಸೂಚನೆ ಮೇರೆಗೆ ತೊರೆದಿದ್ದ ಮನೆಗಳಲ್ಲಿ ಅಳಿದುಳಿ ದಿರುವ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ, ಇನ್ನು ಕೆಲವರು ಕಳೆದುಕೊಂಡಿರುವ ಮನೆಗಳ ಅವಶೇಷ ಕಂಡು ದುಃಖಿತರಾಗಿ ಮರಳಿ ಪರಿಹಾರ ಕೇಂದ್ರಗಳನ್ನು ಸೇರಿಕೊಳ್ಳುತ್ತಿದ್ದಾರೆ.
ಮನೆ ಬಾಗಿಲಿಗೆ ನೆರವು : ಒಂದೆಡೆ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬ ಸದಸ್ಯರುಗಳ ಮನೆ ಬಾಗಿಲಿಗೆ ಜಿಲ್ಲಾಡಳಿತವು, ವಾಹನಗಳ ವ್ಯವಸ್ಥೆಯೊಂದಿಗೆ ಮನೆ ಬಾಗಿಲಿಗೆ
(ಮೊದಲ ಪುಟದಿಂದ) ಆಹಾರ ಸಾಮಗ್ರಿ ತಲಪಿಸುವ ಕಾರ್ಯದಲ್ಲಿ ತೊಡಗಿದೆ. ಆಯಾ ಪ್ರದೇಶದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಯನ್ನು ಪಶು ಸಂಗೋಪನಾ ತಂಡವನ್ನು ಕಳುಹಿಸಿ ಮನುಷ್ಯರೊಂದಿಗೆ, ಜಾನುವಾರುಗಳಿಗೂ ಆಹಾರ, ಔಷಧಿಗಳನ್ನು ವಿತರಿಸಲಾಗುತ್ತಿದೆ.
ಶೈಕ್ಷಣಿಕ ಚಟುವಟಿಕೆ: ನಿನ್ನೆಯಿಂದ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ - ಕಾಲೇಜುಗಳೊಂದಿಗೆ ಅಂಗನವಾಡಿ ಕೇಂದ್ರಗಳು ಪುನರಾರಂಭಗೊಂಡಿದ್ದು, ಸಂತ್ರಸ್ತ ಕುಟುಂಬಗಳ ಹೊರತಾಗಿ ಕೊಡಗು ಸಹಜ ಸ್ಥಿತಿಯತ್ತ ಮರಳುವಂತಾಗಿದೆ. ಜಿಲ್ಲೆಯ ಎಲ್ಲೆಲ್ಲಿ ಭೂಕುಸಿತದೊಂದಿಗೆ ರಸ್ತೆಗಳಲ್ಲಿ ಮಣ್ಣು ಆವರಿಸಿತ್ತೋ, ಅಂತಹ ಹೆಚ್ಚಿನ ಭಾಗಗಳಲ್ಲಿ ಮಣ್ಣು ತೆರವುಗೊಳಿಸಿ, ತುರ್ತು ಸಂಚಾರಕ್ಕೆ ಜೀಪು ಇತ್ಯಾದಿ ಓಡಾಡುವಷ್ಟು ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಶಾಸಕರುಗಳಾದಿಯಾಗಿ ವಿವಿಧ ಇಲಾಖಾ ಮಂದಿ ಯಶಸ್ವಿಯಾಗಿದ್ದಾರೆ.
ಪರಿಹಾರ ವಿತರಣೆ
ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಕಡೆಗಳಿಗೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಗೆ ಆಹಾರ ಸಾಮಗ್ರಿಗಳು, ವೈದ್ಯಕೀಯ ಸಾಮಗ್ರಿಗಳು, ಕುಡಿಯುವ ನೀರು ಹಾಗೂ ಇತರೆ ಅಗತ್ಯ ಪರಿಹಾರ ಸಾಮಗ್ರಿಗಳು 10 ಭಾರೀ ಹಾಗೂ ಲಘು ವಾಹನಗಳಲ್ಲಿ ಜಿಲ್ಲೆಗೆ ಬಂದಿರುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನೆರೆ ಸಂತ್ರಸ್ತರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗಳ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮುಖಾಂತರ ಹಂಚಿಕೆ ಮಾಡಲು 23 ಲಘು ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರಮುಖ ಅವಶ್ಯವಿರುವ ಸಾಮಗ್ರಿಗಳು: 320 ಕೆ.ಜಿ. ಅಕ್ಕಿ, 40 ಕೆ.ಜಿ. ಸಕ್ಕರೆ, 31 ಲೀಟರ್ ಎಣ್ಣೆ, 60 ಕೆ.ಜಿ. ತೊಗರಿ ಬೇಳೆ, 40 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 475 ಹೊದಿಕೆಗಳು, 341 ಉಡುಗೆ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗೆ ತಾ. 3 ರಂದು ವಿತರಣೆ ಮಾಡಲಾಗಿದೆ.
ಸಂತ್ರಸ್ತರ ವಿವರ: ಮಡಿಕೇರಿ ತಾಲೂಕಿನ 11 ಪರಿಹಾರ ಕೇಂದ್ರಗಳಲ್ಲಿ 430 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 559 ಗಂಡು, ಮತ್ತು 592 ಹೆಣ್ಣು ಸೇರಿದಂತೆ 1151 ಜನ ಸಂತ್ರಸ್ತರಿದ್ದಾರೆ.
ಸೋಮವಾರಪೇಟೆ ತಾಲೂಕಿನ 03 ಪರಿಹಾರ ಕೇಂದ್ರಗಳಲ್ಲಿ 190 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 251 ಗಂಡು ಮತ್ತು 264 ಹೆಣ್ಣು ಸೇರಿದಂತೆ ಒಟ್ಟು 515 ಜನ ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 14 ಪರಿಹಾರ ಕೇಂದ್ರಗಳಲ್ಲಿ ಒಟ್ಟು 620 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 810 ಪುರುಷರು ಮತ್ತು 856 ಮಹಿಳೆಯರು ಸೇರಿದಂತೆ ಒಟ್ಟು 1666 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ. ಆ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಅಲ್ಲಲ್ಲಿ ಪ್ರವಾಹ ಪೀಡಿತ ಕುಟುಂಬಗಳ ಕಷ್ಟ ನಷ್ಟ ಆಲಿಸುತ್ತಾ, ಘಟನಾ ಸ್ಥಳಗಳಲ್ಲಿ ಖುದ್ದು ಪರಿಶೀಲಿಸಿ ನಷ್ಟದ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.