ಶನಿವಾರಸಂತೆ, ಸೆ. 5: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಲಭ್ಯವಿರುವ ಬಂಡವಾಳವನ್ನು ವ್ಯಾಪಾರಕ್ಕೆ ಹಾಗೂ ಅಭಿವೃದ್ಧಿಗೆ ವಿನಿಯೋಗಿಸಿಕೊಂಡು ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಸಾಲಿನಲ್ಲಿ ಸಂಘ ರೂ. 12,95,014 ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ತಿಳಿಸಿದ್ದಾರೆ. ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಕಚೇರಿಯ ಹಿಂಬದಿ ನೂತನವಾಗಿ ರೂ. 7.25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗೋದಾಮನ್ನು ಅವರು ಉದ್ಘಾಟಿಸಿದರು. ಸಂಘ ಅಭಿವೃದ್ಧಿಗೊಂಡು ಪ್ರಗತಿಯತ್ತ ಸಾಗಲು ಸದಸ್ಯರು, ನೌಕರರ ಪೂರ್ಣ ಸಹಕಾರವೇ ಕಾರಣ ಎಂದರು.

ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಮಳೆಯಿಂದ ಸಂತ್ರಸ್ತರಾದ ಜನರಿಗೆ ಸಹಾಯದ ರೂಪದಲ್ಲಿ ಸಂಘದ ವತಿಯಿಂದ ರೂ. 10 ಸಾವಿರ ನೀಡುವಂತೆ ತೀರ್ಮಾನಿಸಲಾಯಿತು. ಮಹಾಸಭೆಯ ಚರ್ಚಾ ವಿಚಾರದಲ್ಲಿ ಸದಸ್ಯರುಗಳಾದ ಲಕ್ಷ್ಮಣ, ಆನಂದ, ಉಮಾಶಂಕರ್, ಮಲ್ಲಪ್ಪ, ದೊಡ್ಡಪ್ಪ, ಪ್ರೇಮ್‍ಕುಮಾರ್, ಮಹಮ್ಮದ್ ಗೌಸ್ ಹಾಗೂ ಇತರರು ಪಾಲ್ಗೊಂಡಿದ್ದರು. ನಿಧನರಾದ ಸಂಘದ ಸದಸ್ಯರಿಗೆ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಹೆಚ್.ಸಿ. ದೀಪಕ್, ನಿರ್ದೇಶಕರುಗಳಾದ ಗಿರಿಜಾ ಕರುಣಾಕರ್, ದೇವಾಂಬಿಕ ಮಹೇಶ್, ಎಸ್.ಸಿ. ಶರತ್ ಶೇಖರ್, ಹೆಚ್.ವಿ. ಮಹಾಂತಪ್ಪ, ಜಿ.ಜಿ. ಪರಮೇಶ್, ಬಿ.ಎಸ್. ಮಂಜುನಾಥ್, ಓ.ವಿ. ಶುಕ್ಲಾಂಬರ, ಹೆಚ್.ಪಿ. ರಾಜು, ಹೆಚ್.ಎಸ್. ಸುಬ್ಬಪ್ಪ, ಎಸ್.ಜೆ. ರವಿಕುಮಾರ್ ಉಪಸ್ಥಿತರಿದ್ದರು. ಸಂಘದ ವ್ಯವಸ್ಥಾಪಕ ಎನ್.ಪಿ. ಶಿವರಾಜ್, ಆಡಳಿತ ಮಂಡಳಿ ವರದಿ ಮಂಡಿಸಿ, ಶರತ್‍ಶೇಖರ್ ಸ್ವಾಗತಿಸಿ, ಶುಕ್ಲಾಂಬರ ವಂದಿಸಿದರು.