ಮಡಿಕೇರಿ, ಸೆ. 6: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಂದೂರು, ಮದೆನಾಡು ಹಾಗೂ ಮಡಿಕೇರಿ ಕೃಷಿಪತ್ತಿನ ಸಹಕಾರ ಮಡಿಕೇರಿ, ಸೆ. 6: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಂದೂರು, ಮದೆನಾಡು ಹಾಗೂ ಮಡಿಕೇರಿ ಕೃಷಿಪತ್ತಿನ ಸಹಕಾರ ದೀರ್ಘಾವಧಿ ಸಾಲಗಳ ಮರು ಪಾವತಿಗೆ ಮೂರು ವರ್ಷಗಳ ಕಾಲಾವಕಾಶ ಕಲ್ಪಿಸುವಂತೆ ಮುಖ್ಯ ಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನಿಸಲಾಯಿತು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಅಪ್ಪಚೆಟ್ಟೊಳಂಡ ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ, ಜಿಲ್ಲೆಯ ವಿವಿಧ ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರುಗಳ ಸಭೆ ನಡೆಸುವದ ರೊಂದಿಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ ಪ್ರಾಕೃತಿಕ ವಿಕೋಪದಿಂದ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

ಇಂದಿನ ಸಭೆಯಲ್ಲಿ ಅಭಿಪ್ರಾಯ ಪಡೆಯುವದರೊಂದಿಗೆ ಮಾತನಾಡಿದ ಮನುಮುತ್ತಪ್ಪ, ಪ್ರಸಕ್ತ ಸಾಲಿನ ಮಳೆಯಿಂದ

(ಮೊದಲ ಪುಟದಿಂದ) ಉತ್ತರಕೊಡಗಿನ ಗಡಿ ಗ್ರಾಮಗಳ ಸಹಿತ ದಕ್ಷಿಣ ಕೊಡಗಿನ ಬಿರುನಾಣಿ, ತೆರಾಲು ತನಕವೂ ಹಾನಿ ಸಂಭವಿಸಿದ್ದು, ಹಿಂದೆಂದೂ ಕಂಡರಿಯದ ಮಳೆಯಾಗಿದೆ ಎಂದು ನೆನಪಿಸಿದರು. ಜಿಲ್ಲೆಯಲ್ಲಿ ಮಳೆಯ ಹೊಡೆತದಿಂದ ಸಾವು - ನೋವು ಸಂಭವಿಸುವದರೊಂದಿಗೆ ಭತ್ತ, ಕಾಫಿ, ಕಾಳು ಮೆಣಸು, ಏಲಕ್ಕಿ ಸಹಿತ ಇತರ ಬೆಳೆಗಳಿಗೆ ಅಪಾರ ನಷ್ಟವಲ್ಲದೆ ಮನೆಗಳನ್ನು ಕಳೆದುಕೊಂಡು ಅನೇಕ ಕುಟುಂಬಗಳು ಬೀದಿಗೆ ಬರು ವಂತಾಗಿದೆ ಎಂದು ವಿಷಾದಿಸಿದರು. ಆ ನಿಟ್ಟಿನಲ್ಲಿ ಅತಿವೃಷ್ಟಿಗೆ ಸಿಲುಕಿರುವ ರೈತರ ಸಹಿತ ಎಲ್ಲಾ ಬೆಳೆಗಾರರ ಸಮಸ್ಯೆಗೆ ಸರಕಾರ ಸ್ಪಂದಿಸಲು ಕೋರಿ ನಿಯೋಗ ತೆರಳಲಾಗುವದು ಎಂದು ಪ್ರಕಟಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳ ಸಹಿತ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ನಿಯೋಗ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರು, ಇತರ ಮಂತ್ರಿಗಳನ್ನು ಭೇಟಿ ಮಾಡಿ ಸಂಕಷ್ಟ ತಿಳಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಹಕಾರ ಒಕ್ಕೂಟದ ಉಪಾಧ್ಯಕ್ಷ ನಿಂಗಪ್ಪ, ವಿವಿಧ ವಿಎಸ್‍ಎಸ್‍ಎನ್ ಪ್ರಮುಖರಾದ ತಳೂರು ಕಿಶೋರ್‍ಕುಮಾರ್, ಮಾತಂಡ ಪೂವಯ್ಯ, ನಾಪಂಡ ರ್ಯಾಲಿ ಮಾದಯ್ಯ, ಎಂ.ಬಿ. ಪೊನ್ನಪ್ಪ, ಎಸ್.ಬಿ. ಭರತ್‍ಕುಮಾರ್, ಕನ್ನಂಡ ಸಂಪತ್, ಕ್ಲೈವ್ ಪೊನ್ನಪ್ಪ ಮೊದಲಾದವರು ಮಾತನಾಡಿ, ಸಾಲಮನ್ನಾ ಸಂಬಂಧ ಸಲಹೆಗಳನ್ನು ನೀಡಿದರು.

ಯಾವದೇ ಸಹಕಾರ ಸಂಘಗಳ ಠೇವಣಿದಾರರು ತಮ್ಮ ಉಳಿತಾಯ ಖಾತೆ ಠೇವಣಿಗಳನ್ನು ಹಿಂಪಡೆಯದಂತೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಯೋಗಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬಿ.ಎ. ರಮೇಶ್ ಚಂಗಪ್ಪ, ರವಿಬಸಪ್ಪ ಮೊದಲಾದವರು ಉಪಸ್ಥಿತರಿದ್ದರು.