ಕುಶಾಲನಗರ, ಸೆ. 6: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪ್ರಮುಖರು ವಿವಿಧೆಡೆ ತೆರಳಿ ನೆರವು ನೀಡಿದರು.
ವೇದಿಕೆಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್, ಸ್ಥಳೀಯರಾದ ಹರಿ ಪರ್ಲಕೋಟಿ ಮತ್ತಿತರರು ಹಾಲೇರಿ, ಮಕ್ಕಂದೂರು, ಹೆಮ್ಮೆತ್ತಾಳು ಮತ್ತಿತರ ಕಡೆ ಮನೆಗಳಿಗೆ ತೆರಳಿ ಸಂತ್ರಸ್ತರನ್ನು ಗುರುತಿಸಿ 25 ಮಂದಿಗೆ ತಲಾ ರೂ. 2 ಸಾವಿರಗಳ ಸಹಾಯಧನ ನೀಡಿದರು.
ಈ ಸಂದರ್ಭ ವೇದಿಕೆಯ ಪ್ರಮುಖರಾದ ಲಿಂಗೇಗೌಡ, ರಾಜಶೇಖರ್, ಸುರ್ಜಿತ್, ನವೀನ್ ಮತ್ತಿತರರು ಇದ್ದರು.