ಸೋಮವಾರಪೇಟೆ, ಸೆ. 5: ಭಾರೀ ಮಳೆಯಿಂದಾಗಿ ಸಮೀಪದ ಗರ್ವಾಲೆ ಗ್ರಾಮದಲ್ಲಿ ಭೂಕುಸಿತವಾಗಿ 18 ದಿನ ಕಳೆದರೂ ಇದುವರೆಗೆ ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ಆ. 17ರಂದು ಗರ್ವಾಲೆ ಗ್ರಾಮದಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿ ಆಸ್ತಿ, ಪಾಸ್ತಿ ಹಾನಿಯಾಗಿದೆ. ಆತಂಕದಲ್ಲೇ ಗ್ರಾಮಸ್ಥರು ದಿನ ದೂಡುತ್ತಿದ್ದು, ಸೌಜನ್ಯಕ್ಕೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ತಾಚಮಂಡ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರ್ವಾಲೆ ಗ್ರಾಮದ ಒಂದು ಭಾಗದಲ್ಲಿ ತಾಚಮಂಡ ಕುಟುಂಬಕ್ಕೆ ಸೇರಿದ 15 ಕುಟುಂಬಗಳು ವಾಸಿಸುತ್ತಿದ್ದು, ಆ. 17 ರಂದು ಬೆಳಿಗ್ಗೆ 7 ಗಂಟೆಗೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಕಾಫಿ ತೋಟ, ಭತ್ತದ ಕೃಷಿ ಭೂಮಿ ನಾಶವಾಗಿದೆ. ರಸ್ತೆಗಳು ಕುಸಿದಿವೆ. ಪ್ರಾಣ ಉಳಿಸಿಕೊಂಡು ಪಟ್ಟಣದ ಪರಿಹಾರ ಕೇಂದ್ರದಲ್ಲಿದ್ದ ಮಂದಿ ಇತ್ತೀಚೆಗೆ ವಾಪಸ್ಸಾಗಿದ್ದು,ಇದುವರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಹಾನಿಯ ಬಗ್ಗೆ ಮಾಹಿತಿ ಪಡೆದಿಲ್ಲ ಎಂದು ತಾಚಮಂಡ ಕಾವೇರಪ್ಪ ಆರೋಪಿಸಿದ್ದಾರೆ.

ಗ್ರಾಮದ ಟಿ.ಕೆ. ಕಾವೇರಪ್ಪ, ಟಿ.ಪಿ. ಅಪ್ಪಣ್ಣ, ಟಿ.ಡಿ. ತಮ್ಮಯ್ಯ, ಟಿ.ಪಿ. ಮಹೇಶ್, ಭಾರತ ಸೇನೆಯಲ್ಲಿ

ಪ್ರಮಾಣದಲ್ಲಿ ಭೂಕುಸಿತವಾಗಿದೆ. ಕಾಫಿ ತೋಟ, ಭತ್ತದ ಕೃಷಿ ಭೂಮಿ ನಾಶವಾಗಿದೆ. ರಸ್ತೆಗಳು ಕುಸಿದಿವೆ. ಪ್ರಾಣ ಉಳಿಸಿಕೊಂಡು ಪಟ್ಟಣದ ಪರಿಹಾರ ಕೇಂದ್ರದಲ್ಲಿದ್ದ ಮಂದಿ ಇತ್ತೀಚೆಗೆ ವಾಪಸ್ಸಾಗಿದ್ದು,ಇದುವರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಹಾನಿಯ ಬಗ್ಗೆ ಮಾಹಿತಿ ಪಡೆದಿಲ್ಲ ಎಂದು ತಾಚಮಂಡ ಕಾವೇರಪ್ಪ ಆರೋಪಿಸಿದ್ದಾರೆ.

ಗ್ರಾಮದ ಟಿ.ಕೆ. ಕಾವೇರಪ್ಪ, ಟಿ.ಪಿ. ಅಪ್ಪಣ್ಣ, ಟಿ.ಡಿ. ತಮ್ಮಯ್ಯ, ಟಿ.ಪಿ. ಮಹೇಶ್, ಭಾರತ ಸೇನೆಯಲ್ಲಿ