ಮಡಿಕೇರಿ, ಸೆ. 6: ರಾಜ್ಯ ಆರ್ಯ ವೈಶ್ಯ ಸಮಾಜ ಕೊಡಗಿಗೆ 2 ಕೋಟಿ ರೂಪಾಯಿ ನೆರವು ನೀಡಲು ಮುಂದಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.ಇಂದು ಸಮಾಜದ ಅಧ್ಯಕ್ಷರು, ಆಡಳಿತ ಮಂಡಳಿ, ವಿಧಾನ ಪರಿಷತ್‍ನ ಮಾಜಿ ಸಭಾಒತಿ ಡಿ.ಹೆಚ್. ಶಂಕರಮೂರ್ತಿ ಇವರುಗಳೊಂದಿಗೆ ನಡೆದ ಸಭೆಯಲ್ಲಿ ಸಮಾಜ ಈ ತೀರ್ಮಾನ ಪ್ರಕಟಿಸಿರುವದಾಗಿ ಶಾಸಕರು ವಿವರಿಸಿದ್ದಾರೆ.

ಮುಂದೆ ಸಂತ್ರಸ್ತರಿಗೆ ಮನೆ ನಿರ್ಮಿಸುವ ಸಂದರ್ಭ ಈ ಹಣವನ್ನು ಬಳಕೆ ಮಾಡಲು ತಾವು ಸಲಹೆ ನೀಡಿರುವದಾಗಿ ರಂಜನ್ ತಿಳಿಸಿದ್ದಾರೆ.