ಸೋಮವಾರಪೇಟೆ, ಸೆ. 5: ಮಹಾಮಳೆಯಿಂದ ಹಾನಿಗೀಡಾಗಿರುವ ಸೋಮವಾರಪೇಟೆ ತಾಲೂಕಿನ ಕೆಲ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರ. ಮಹೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ಭಾರೀ ಭೂಕುಸಿತದಿಂದ ಪ್ರಶಾಂತ್ ದೇವಪ್ಪ ಅವರ ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವದನ್ನು ಸಚಿವರು ಪರಿಶೀಲಿಸಿದರು. ನಂತರ ತಾಕೇರಿ, ಕಿರಗಂದೂರು ಭಾಗದಲ್ಲಿ ಹಾನಿಗೊಳಗಾದ ಕೃಷಿ ಪ್ರದೇಶಗಳನ್ನು ವೀಕ್ಷಿಸಿದರು. ಈ ಸಂದರ್ಭ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಪಕ್ಷದ ಮುಖಂಡರಾದ ಸಂಜಯ್ ಜೀವಿಜಯ, ಬಗ್ಗನ ಅನಿಲ್ಕುಮಾರ್, ತ್ರಿಶೂಲ್, ಯುವ ಘಟಕದ ಅಧ್ಯಕ್ಷ ಪ್ರವೀಣ್, ರಾಜ್ಯ ಸಮಿತಿಯ ರಾಜಾರಾವ್, ಕಾರ್ಮಾಡು ಸುಬ್ಬಣ್ಣ, ತಮ್ಮಯ್ಯ, ರಾಜೇಶ್, ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.