ಸುಂಟಿಕೊಪ್ಪ, ಸೆ. 5: ಸುಂಟಿಕೊಪ್ಪ ನಾಡು ಪ್ರೌಢಶಾಲಾ ಆತಿಥ್ಯದಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಆರಂಭಗೊಂಡಿರುವ ಕ್ರೀಡಾಕೂಟಕ್ಕೆ ಶಾಲಾ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕ್ರೀಡಾ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಿದರು.
ಸೋಮವಾರಪೇಟೆ ತಾಲೂಕು ದೈಹಿಕ ಪರಿವೀಕ್ಷಕ ವೆಂಕಟೇಶ್ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವದರಿಂದ ಸಧೃಡ ಆರೋಗ್ಯ ಹೊಂದಲು ಸಹಕಾರಿಯಾಗಲಿದೆ. ಕ್ರೀಡಾಪಟುಗಳಿಗೆ ಕ್ರೀಡಾಸ್ಪೂರ್ತಿ ಮುಖ್ಯ. ಇಲ್ಲದಿದ್ದರೆ ಕ್ರೀಡೆಯಲ್ಲಿ ಬೆಳೆಯಲು ಆಸಾಧ್ಯ. ಕ್ರೀಡಾಪಟುಗಳು ಸೋಲು-ಗೆಲುವೆಂದು ಪರಿಗಣಿಸದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ತಾವು ಎಸಗಿದ ತಪ್ಪುಗಳ ಬಗ್ಗೆ ಅರಿವು ತಂದುಕೊಳ್ಳುವದರಿಂದ ಕ್ರೀಡಾಕೂಟದಲ್ಲಿ ಉತ್ತುಂಗ ವiಟ್ಟಕ್ಕೆ ಏರಲು ಸಹಕಾರಿಯಾಗಲಿದೆ ಎಂದರು.
ಶಾಲಾ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಸ್.ಬಿ. ಶಂಕರ್, ಉಪಾಧ್ಯಕ್ಷೆ ಮೀನಾ ಸೋಮಯ್ಯ, ಆಡಳಿತ ಸದಸ್ಯರುಗಳಾದ ಸನ್ನಿ ಕಾರ್ಯಪ್ಪ, ಕುಟ್ಟಪ್ಪ, ಪಂಚಾಯಿತಿ ಸದಸ್ಯ ಉಸ್ಮಾನ್, ವಿವಿಧ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಶಿಕ್ಷಕಿಯರು ಮತ್ತಿತರರು ಇದ್ದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಇ. ಇಂದಿರಾ ಸ್ವಾಗತಿಸಿ, ಶಿಕ್ಷಕ ಗುರ್ಕಿ ವಂದಿಸಿದರು.