ಸೋಮವಾರಪೇಟೆ, ಸೆ. 6: ಇಲ್ಲಿನ ಪುಷ್ಪಗಿರಿ ಜೇಸಿರೇಟ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಸುರಕ್ಷಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೇಸಿರೇಟ್ಸ್ ಅಧ್ಯಕ್ಷೆ ಮಾಯಾ ಗಿರೀಶ್ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳು ಪರಿಸರ ಸ್ವಚ್ಛತೆಯೊಂದಿಗೆ ತಮ್ಮ ವೈಯಕ್ತಿಕ ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಉತ್ತಮ ಆರೋಗ್ಯವನ್ನು ಹೊಂದಲು ವೈಯಕ್ತಿಕ ಶುಚಿತ್ವÀ ಅಗತ್ಯ ಎಂದರು. ಇದೇ ಸಂದÀರ್ಭ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನ್ಯಾಪ್ಕಿನ್ ನಾಶಪಡಿಸುವ ಯಂತ್ರವನ್ನು ನೀಡಲಾಯಿತು.

ಜೇಸಿ ವಲಯ 14ರ ಅಧ್ಯಕ್ಷ ವಿಕಾಸ್ ಗೂಗ್ಲಿಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಹಿಂದುಳಿದ ವÀರ್ಗಗಳ ಇಲಾಖೆಯ ಅಧಿಕಾರಿ ಶ್ರೀಕಾಂತ್, ಪುಷ್ಪಗಿರಿ ಜೇಸಿ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಜೇಸಿರೇಟ್ಸ್ ಕಾರ್ಯದರ್ಶಿ ಶೈಲಾ ವಸಂತ್, ಪದಾಧಿಕಾರಿಗಳಾದ ಗಿರೀಶ್, ದರ್ಶನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.