ಮಡಿಕೇರಿ, ಸೆ. 5: ಮಡಿಕೇರಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಮಡಿಕೇರಿ ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ರಾಮಚಂದ್ರ, ಸ.ಪ.ಪೂ. ಕಾಲೇಜು ಮಡಿಕೇರಿ (ಪ್ರೌಢ ಶಾಲಾ ವಿಭಾಗ) ಉಪ ಪ್ರಾಂಶುಪಾಲರು ಕೆ.ಪಿ. ಗುರುರಾಜು, ಇ.ಸಿ.ಒ, ಬಿ.ಆರ್.ಪಿ., ಬಿ.ಐ.ಇ. ಆರ್.ಟಿ. ಹಾಗೂ ಸಿ.ಆರ್.ಪಿ., ಮಡಿಕೇರಿ ತಾಲೂಕಿನ ಸರ್ಕಾರಿ, ಆನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸ್ತು ಪ್ರದರ್ಶನದ ಮುಖ್ಯ ವಿಷಯವಾದ ಜೀವನದ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಇದಕ್ಕೆ ಸಂಬಂಧಿಸಿದಂತೆ ಉಪ ವಿಷಯ ಗಳಾದ ವ್ಯವಸಾಯ ಮತ್ತು ಸಾವಯವ ಕೃಷಿ ವಿಷಯಕ್ಕೆ ಸಂಬಂಧಿಸಿದ್ದಂತೆ ಪ್ರಥಮ ಸ್ಥಾನವನ್ನು ಸ.ಪ.ಪೂ. ಕಾಲೇಜು ನಾಪೋಕ್ಲು (ಪ್ರೌಢ ಶಾಲಾ ವಿಭಾಗ), ದ್ವಿತೀಯ ಸ್ಥಾನವನ್ನು ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ ಹಾಗೂ ತೃತೀಯ ಸ.ಪ್ರೌ. ಶಾಲೆ ಹಾಕತ್ತೂರು ವಿದ್ಯಾರ್ಥಿಗಳ ತಂಡ ಪಡೆದಿರುತ್ತಾರೆ. ಆರೋಗ್ಯ ಮತ್ತು ನೈರ್ಮಲ್ಯ ವಿಷಯಕ್ಕೆ ಸಂಬಂಧ, ಪ್ರಥಮ ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ದ್ವಿತೀಯ ಸಂತ ಜೋಸೇಫರ ಶಾಲೆ ಮಡಿಕೇರಿ ಹಾಗೂ ತೃತೀಯ ರಾಜರಾಜೇಶ್ವರಿ ಶಾಲೆ ಮಡಿಕೇರಿ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು. ಸಂಪನ್ಮೂಲ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಪದವಿಪೂರ್ವ ಕಾಲೇಜು ಚೇರಂಬಾಣೆ, ದ್ವಿತೀಯ ಶ್ರೀ ಕೃಷ್ಣ ವಿದ್ಯಾಮಂದಿರ ಸಿದ್ದಾಪುರ ಹಾಗೂ ತೃತೀಯ ಮದೆ ಮಹೇಶ್ವರ ಪ್ರೌಢಶಾಲೆ ಮದೆ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು. ತ್ಯಾಜ ನಿರ್ವಹಣೆ ವಿಷಯಕ್ಕೆ ಸಂಬಂಧ ಪ್ರಥಮ ಸಂತ ಮೈಕಲರ ಶಾಲೆ ಮಡಿಕೇರಿ, ದ್ವಿತೀಯ ಜ್ಞಾನಜ್ಯೋತಿ ಪ್ರೌಢಶಾಲೆ ಮೂರ್ನಾಡು ಹಾಗೂ ತೃತೀಯ ಸ.ಪ.ಪೂ. ಕಾಲೇಜು ಮಡಿಕೇರಿ (ಪ್ರೌಢ ಶಾಲಾ ವಿಭಾಗ) ವಿದ್ಯಾರ್ಥಿಗಳ ತಂಡ ಪಡೆದಿರುತ್ತಾರೆ.
ಸಾರಿಗೆ ಮತ್ತು ಸಂಪರ್ಕ ವಿಷಯಕ್ಕೆ ಸಂಬಂಧ ಪ್ರಥಮ ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ದ್ವಿತೀಯ ರಾಜ ರಾಜೇಶ್ವರಿ ಶಾಲೆ ಮಡಿಕೇರಿ ಹಾಗೂ ತೃತೀಯ ಕೊಡಗು ವಿದ್ಯಾಲಯ ಮಡಿಕೇರಿ ಪಡೆದಿರುತ್ತಾರೆ.
ಗಣಿತ ಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ ವಿಷಯಕ್ಕೆ ಸಂಬಂಧ ಪ್ರಥಮ ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ದ್ವಿತೀಯ ಅರುಣ ಪದವಿಪೂರ್ವ ಕಾಲೇಜು ಚೆರಂಬಾಣೆ, ತೃತೀಯ ಸ.ಪ್ರೌ. ಶಾಲೆ ಕಡಗದಾಳು ವಿದ್ಯಾರ್ಥಿಗಳ ತಂಡ ಪಡೆದಿರುತ್ತಾರೆ. ವಸ್ತು ಪ್ರದರ್ಶನದಲ್ಲಿ 30 ಶಾಲೆಗಳ 125 ವಿದ್ಯಾರ್ಥಿಗಳು ಹಾಗೂ 35 ಶಿಕ್ಷಕರು ಭಾಗವಹಿಸಿದ್ದರು.