ಮಡಿಕೇರಿ, ಸೆ. 6: ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ವಿಶೇಷ ಅನುದಾನ ಕೋರಿ ನಗರಸಭೆ ಆಡಳಿತದಿಂದ ರಾಜ್ಯದ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ರೂ. 25 ಕೋಟಿ ಅನುದಾನ ಪಡೆಯಲು ಇಂದಿನ ತುರ್ತು ಸಭೆ ನಿರ್ಧರಿಸಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.ಸದಸ್ಯ ಮನ್ಸೂರ್ ಇಷ್ಟು ವಿಳಂಬವಾಗಿ ಸಭೆ ಕರೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ಪ್ರಾಕೃತಿಕ ವಿಕೋಪದಲ್ಲಿ ಮಡಿದವರಿಗೆ ಚುಮ್ಮಿದೇವಯ್ಯ ಪ್ರಸ್ತಾವನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದಲ್ಲಿ ಹದಗೆಟ್ಟಿರುವ ರಸ್ತೆಗಳು ಸೇರಿದಂತೆ ಇತರ ನಷ್ಟ ರೂ. 10.60 ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಬಾರ ಆಯುಕ್ತ ಗೋಪಾಲಕೃಷ್ಣ ಸಭೆಯ ಗಮನ ಸೆಳೆದರು.ಈ ಸಂಬಂಧ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಅಮೀನ್ ಮೊಯ್ಸಿನ್ ಅವರುಗಳು ಚರ್ಚೆಯಲ್ಲಿ ಪಾಲ್ಗೊಂಡು ಆದಷ್ಟು ಶೀಘ್ರ ರಸ್ತೆ ಕಾಮಗಾರಿಗೆ ಆಗ್ರಹಿಸಿದರು. ನಗರಸಭೆ ವ್ಯಾಪ್ತಿಯಲ್ಲಿ 50 ಕಿ.ಮೀ. ರಸ್ತೆಗಳನ್ನು ತಕ್ಷಣದಿಂದ ಸರಿಪಡಿಸಲು ಸಭೆ ನಿರ್ಧರಿಸಿತು.

ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದಲ್ಲಿ ಹದಗೆಟ್ಟಿರುವ ರಸ್ತೆಗಳು ಸೇರಿದಂತೆ ಇತರ ನಷ್ಟ ರೂ. 10.60 ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಬಾರ ಆಯುಕ್ತ ಗೋಪಾಲಕೃಷ್ಣ ಸಭೆಯ ಗಮನ ಸೆಳೆದರು.

ಈ ಸಂಬಂಧ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಅಮೀನ್ ಮೊಯ್ಸಿನ್ ಅವರುಗಳು ಚರ್ಚೆಯಲ್ಲಿ ಪಾಲ್ಗೊಂಡು ಆದಷ್ಟು ಶೀಘ್ರ ರಸ್ತೆ ಕಾಮಗಾರಿಗೆ ಆಗ್ರಹಿಸಿದರು. ನಗರಸಭೆ ವ್ಯಾಪ್ತಿಯಲ್ಲಿ 50 ಕಿ.ಮೀ. ರಸ್ತೆಗಳನ್ನು ತಕ್ಷಣದಿಂದ ಸರಿಪಡಿಸಲು ಸಭೆ ನಿರ್ಧರಿಸಿತು.

ಅತಿಕ್ರಮಣದಿಂದ ಕೈಗಾರಿಕಾ ಬಡಾವಣೆಯಲ್ಲಿ ಎದುರಾಗಿರುವ ದುರಂತದ ಬಗ್ಗೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರಸ್ತಾಪಿಸಿದರಲ್ಲದೆ, ಸರಕಾರದಿಂದ ಅಗತ್ಯ ಅನುದಾನ ಪಡೆದು ತಡೆಗೋಡೆ ಕೈಗೊಳ್ಳಲು ಸಲಹೆ ನೀಡಿದರು. ಉನ್ನಿಕೃಷ್ಣ ಹಾಗೂ ಇತರರು ರಾಜ ಕಾಲುವೆಯ ಇಕ್ಕಡೆಗಳಲ್ಲಿ ಅಲ್ಲಲ್ಲಿ ಆಗಿರುವ ಅತಿಕ್ರಮಣ ತೆರವಿಗೆ ಆಗ್ರಹಿಸಿದರು.

ಸೂಕ್ತ ಕ್ರಮಕ್ಕೆ ನಿರ್ಣಯ: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 90 ಮನೆಗಳು ಬಿದ್ದಿದ್ದು, 200 ಮನೆಗಳಷ್ಟು ಭಾಗಶಃ ಹಾನಿಗೊಂಡಿರುವ ಬಗ್ಗೆ ಚರ್ಚಿಸಲಾಯಿತು. ಇಂದಿರಾನಗರ, ಚಾಮುಂಡೇಶ್ವರಿ ನಗರ ಮುಂತಾದ ಬೆಟ್ಟಸಾಲುಗಳಲ್ಲಿ ಮರಳಿ ಮನೆ ನಿರ್ಮಿಸಲು ಅವಕಾಶ ನೀಡದೆ, ಬದಲಿ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿ ಮಳೆ - ಗಾಳಿಗೆ ಹಲವು ವಾರ್ಡ್‍ಗಳಲ್ಲಿ ರಸ್ತೆ ಕುಸಿತ, ಬರೆ ಕುಸಿತ, ಚರಂಡಿ ಕುಸಿತ ಮತ್ತು ಶುಚಿತ್ವ ಕೆಲಸ, ಕುಡಿಯುವ ನೀರಿನ ಪೈಪ್‍ಲೈನ್ ಹಾಗೂ ಬೀದಿ ದೀಪ ಹಾನಿಯಾಗಿರುವ ಬಗ್ಗೆ ಮತ್ತು ತುರ್ತು ಕ್ರಮ ವಹಿಸುವ ಬಗ್ಗೆ ಚರ್ಚಿಸಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನಕ್ಕಾಗಿ ಇಂದಿನ ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ನೀಡಿದರು.