ಶನಿವಾರಸಂತೆ, ಸೆ. 6: ಜಿಲ್ಲಾಧಿಕಾರಿಗಳು ಮರದ ದಿಮ್ಮಿ ಸಾಗಾಣಿಕೆ ನಿರ್ಬಂಧವನ್ನು ಸಡಿಲಗೊಳಿಸಬೇಕಾಗಿ ಲಾರಿ ಮಾಲೀಕರು ಮರದ ವ್ಯಾಪಾರಿಗಳು, ಕೃಷಿಕರು ಮತ್ತು ಕಾರ್ಮಿಕರು ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ದೊಡ್ಡ ಪ್ರಮಾಣದ ಹಾನಿಯಾಗಿ ಸಹಸ್ರ್ತಾರು ಮಂದಿ ನಿರಾಶ್ರಿತರಾಗಿದ್ದಾರೆ. ಇದರಿಂದ ಹಲವಷ್ಟು ಮಂದಿ ಅತಂತ್ರತೆಯಲ್ಲಿದ್ದಾರೆ.

ಪೈನಾನ್ಸ್ ಮತ್ತು ಬ್ಯಾಂಕ್‍ಗಳಿಂದ ವಿವಿಧ ಸಂಘ ಸಂಸ್ಥೆಗಳಿಂದ ಪಡೆದ ಹಣವನ್ನು ಕಟ್ಟಲಾಗದೇ ತೊಂದರೆಯಲ್ಲಿದ್ದಾರೆ. ಆದುದ್ದರಿಂದ ಜಿಲ್ಲಾಧಿಕಾರಿಗಳು ಮರದ ದಿಮ್ಮಿ ಸಾಗಾಣಿಕೆ ನಿರ್ಬಂಧವನ್ನು ಮತ್ತೆ ವಿಸ್ತರಿಸಿರುವದರಿಂದ ತೊಂದರೆಯಾಗಿದೆ. ಜಿಲ್ಲಾಧಿಕಾರಿಯವರು ಆದೇಶವನ್ನು ಆದಷ್ಟು ಬೇಗ ಸಡಿಲಗೊಳಿಸಬೇಕಾಗಿ ಹಾಗೂ ವಾಹನದ ರಹದಾರಿಯಲ್ಲಿರುವ ಮರದ ದಿಮ್ಮಿಗಳ ತೂಕವನ್ನು ಸಾಗಿಸಲು ಅನುಮತಿ ಕೊಡಬೇಕಾಗಿ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯ ಸುಮಾರು 50 ಲಾರಿಗಳ ಮಾಲೀಕರು, ಮರ ವ್ಯಾಪಾರಿಗಳು, ಕೃಷಿಕರು ಮತ್ತು ಕಾರ್ಮಿಕರುಗಳಾದ ಕೆ.ಎಂ. ಮುಸ್ತಫ, ಸಿ.ಎಂ. ಅಬ್ದುಲ್ಲಾ, ಕೆ.ಹೆಚ್. ಮಂಜಣ್ಣ, ಜಾಕಿರ್, ಸುಭಾನ್, ಮೊೈದು, ಜಬ್ಬರ್, ವಿಜಿ, ಎಸ್.ಎ. ಹಮೀದ್ ಅಕ್ಮಲ್, ಯೋಗೇಶ್, ನೈಮನ್, ಬಾಬು, ರಾಜಶೇಖರ್, ಅಶೋಕ್ ಇತರರು ಮನವಿ ಮಾಡಿದ್ದಾರೆ.