ಮಡಿಕೇರಿ, ಸೆ. 5: ಹೊರಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಗರಸಭೆಯ ಕಾರ್ಮಿಕರಿಬ್ಬರು ಈ ಸಂಜೆ ಸಂಶಯಾಸ್ಪದ ರೀತಿ ಸಾವನ್ನಪ್ಪಿದ್ದಾರೆ. ಇಲ್ಲಿನ ಗಾಂಧಿ ಮೈದಾನಕ್ಕೆ ಹೊಂದಿಕೊಂಡಿರುವ ವೇದಿಕೆಯ ಹಿಂದಿನ ಕೊಠಡಿಯಲ್ಲಿ ವಾಸವಿದ್ದ ಸತೀಶ್ (39) ಹಾಗೂ ಉಷಾ (30) ಮೃತರಾಗಿದ್ದು, ಘಟನೆ ಸ್ಥಳದಲ್ಲಿ ಸಾಯುವ ಮುನ್ನ ವಾಂತಿ ಮಾಡಿಕೊಂಡಿರುವ ದೃಶ್ಯ ಕಂಡು ಬಂದಿದೆ. ನಗರಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.