ಸಿದ್ದಾಪುರ, ಸೆ.6: ಈ ಬಾರಿಯ ಮಹಾಮಳೆಗೆ ಪ್ರವಾಹಕ್ಕೆ ಸಿಲುಕಿ ಮನೆಗಳು ಹಾನಿಯಾಗಿರುವ ಕರಡಿಗೋಡು ಗ್ರಾಮ ಹಾಗೂ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆದ ಪ್ರಾಣ ಹಾನಿ, ಆಸ್ತಿಗಳು ನಾಶವಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಪ್ರವಾಹದ ದುರಂತಕ್ಕಾಗಿ ಸಿದ್ದಾಪುರದ ಇವಾಲ್ವ್‍ಬ್ಯಾಕ್ ಸಂಸ್ಥೆ ವತಿಯಿಂದ ರೂ. 50 ಲಕ್ಷ ಮೊತ್ತದ ಸಹಾಯ ಧನವನ್ನು ನೀಡುವ ಮೂಲಕ ಸಂಸ್ಥೆ ಮಾನವೀಯತೆ ಮೆರೆದಿದೆ. ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಕರಡಿಗೋಡು ಗ್ರಾಮದ ನೂರಾರು ಮನೆಗಳು ಜಲಾವೃತ ಗೊಂಡಿತ್ತು. ಅಲ್ಲದೇ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಬಿರುಕು ಬಿಟ್ಟು ಹಾನಿಗೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಇವಾಲ್ವ್‍ಬ್ಯಾಕ್ ಸಂಸ್ಥೆ ಕರಡಿಗೋಡು ಗ್ರಾಮದ ನೂರಾರು ಮಂದಿಗೆ ಸಹಾಯಧನ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡಿದೆ. ಚೆಕ್ ವಿತರಣೆ ಕಾರ್ಯಕ್ರಮವು ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶೀಲಾ ಇಮಾನ್ಯೂವಲ್ ಉದ್ಘಾಟಿಸಿದರು. ಇವಾಲ್ವ್ ಬ್ಯಾಕ್ ಸಂಸ್ಥೆಯ ಅಧ್ಯಕ್ಷ ಇಮಾನ್ಯೂವಲ್ ಟಿ. ರಾಮಪುರಂ ಕುಟ್ಟಪ್ಪನ್ ಮಾತನಾಡಿ, ಈ ಬಾರಿಯ ಮಹಾಮಳೆಗೆ ಕೇರಳ ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಜಲಪ್ರಳಯ ಸಂಭವಿಸಿ ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡು ಆಸ್ತಿಗಳು, ಮನೆಗಳು ನಾಶವಾಗಿದೆ. ಈ ದುರಂತದಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಜಲಪ್ರಳಯದಿಂದಾಗಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಇವಾಲ್ವ್‍ಬ್ಯಾಕ್ ಸಂಸ್ಥೆ ವತಿಯಿಂದ ರೂ 50 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದು, ಈ ಪೈಕಿ ರೂ. 10 ಲಕ್ಷ ನೆರೆಯ ಕೇರಳ ರಾಜ್ಯಕ್ಕೆ ನೀಡುತ್ತಿದ್ದು, ಉಳಿದ 40 ಲಕ್ಷಗಳ ಪೈಕಿ ರೂ. 10 ಲಕ್ಷ ಕರಡಿಗೋಡು ಗ್ರಾಮದ ಸಂತ್ರಸ್ತರಿಗೆ ನೀಡಲಾಗುವದು. ರೂ. 30 ಲಕ್ಷವನ್ನು ತಿಂಗಳಿಗೆ ರೂ.10 ಲಕ್ಷದಂತೆ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಜಿಲ್ಲಾಧಿಕಾರಿಗಳ ಮುಖಾಂತರ ನೀಡಲಾಗುವದೆಂದು ಮಾಹಿತಿ ನೀಡಿದರು. ಕರಡಿಗೋಡು ಗ್ರಾಮದ ನಿವಾಸಿಗಳು ಈಗಾಗಲೇ ಪುನರ್ವಸತಿ ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟಿದ್ದು ಈ ಹಿನ್ನೆಲೆಯಲ್ಲಿ ನದಿ ದಡದ ನಿವಾಸಿಗಳಿಗೆ ಜಿಲ್ಲಾಡಳಿತ ಶಾಶ್ವತ ಸೂರುಗಳನ್ನು ಸುರಕ್ಷಿತ ಸ್ಥಳದಲ್ಲಿ ನೀಡಬೇಕೆಂದು ಕುಟ್ಟಪ್ಪನ್ ಮನವಿ ಮಡಿಕೊಂಡರು ನದಿದಡದ ನಿವಾಸಿಗಳು ಸ್ಥಳಾಂತರಗೊಂಡ ಕೂಡಲೇ ನದಿ ದಡದಲ್ಲಿ ಪಂಚಾಯಿತಿ ಹಾಗೂ ಕಂದಾಯ ರೂ 50 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದು, ಈ ಪೈಕಿ ರೂ. 10 ಲಕ್ಷ ನೆರೆಯ ಕೇರಳ ರಾಜ್ಯಕ್ಕೆ ನೀಡುತ್ತಿದ್ದು, ಉಳಿದ 40 ಲಕ್ಷಗಳ ಪೈಕಿ ರೂ. 10 ಲಕ್ಷ ಕರಡಿಗೋಡು ಗ್ರಾಮದ ಸಂತ್ರಸ್ತರಿಗೆ ನೀಡಲಾಗುವದು. ರೂ. 30 ಲಕ್ಷವನ್ನು ತಿಂಗಳಿಗೆ ರೂ.10 ಲಕ್ಷದಂತೆ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಜಿಲ್ಲಾಧಿಕಾರಿಗಳ ಮುಖಾಂತರ ನೀಡಲಾಗುವದೆಂದು ಮಾಹಿತಿ ನೀಡಿದರು. ಕರಡಿಗೋಡು ಗ್ರಾಮದ ನಿವಾಸಿಗಳು ಈಗಾಗಲೇ ಪುನರ್ವಸತಿ ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟಿದ್ದು ಈ ಹಿನ್ನೆಲೆಯಲ್ಲಿ ನದಿ ದಡದ ನಿವಾಸಿಗಳಿಗೆ ಜಿಲ್ಲಾಡಳಿತ ಶಾಶ್ವತ ಸೂರುಗಳನ್ನು ಸುರಕ್ಷಿತ ಸ್ಥಳದಲ್ಲಿ ನೀಡಬೇಕೆಂದು ಕುಟ್ಟಪ್ಪನ್ ಮನವಿ ಮಡಿಕೊಂಡರು ನದಿದಡದ ನಿವಾಸಿಗಳು ಸ್ಥಳಾಂತರಗೊಂಡ ಕೂಡಲೇ ನದಿ ದಡದಲ್ಲಿ ಪಂಚಾಯಿತಿ ಹಾಗೂ ಕಂದಾಯ