ಮಡಿಕೇರಿ, ಸೆ.6 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿವಿಧ ಮಾಫಿಯಾ ಕೂಟವೇ ಕಾರಣವೆಂದು ಆರೋಪಿ ಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನದಿಂದ ಮಾತ್ರ ಮೂಲ ನಿವಾಸಿಗಳ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಬಿ.ಸಿ. ನಂಜಪ್ಪ, ಮತ ಬ್ಯಾಂಕ್, ಟಿಂಬರ್, ಭೂ ಪರಿವರ್ತನೆ, ರೆಸಾರ್ಟ್, ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ಮಾಫಿಯಾ ಕೂಟಗಳ ತಪ್ಪಿನಿಂದಾಗಿ ಇಂದು ಕೊಡಗು ಈ ದುಸ್ಥಿತಿಗೆ ಬಂದು ತಲಪಿದ್ದು, ಮೂಲ ನಿವಾಸಿಗಳು ಮಡಿಕೇರಿ, ಸೆ.6 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿವಿಧ ಮಾಫಿಯಾ ಕೂಟವೇ ಕಾರಣವೆಂದು ಆರೋಪಿ ಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನದಿಂದ ಮಾತ್ರ ಮೂಲ ನಿವಾಸಿಗಳ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಬಿ.ಸಿ. ನಂಜಪ್ಪ, ಮತ ಬ್ಯಾಂಕ್, ಟಿಂಬರ್, ಭೂ ಪರಿವರ್ತನೆ, ರೆಸಾರ್ಟ್, ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ಮಾಫಿಯಾ ಕೂಟಗಳ ತಪ್ಪಿನಿಂದಾಗಿ ಇಂದು ಕೊಡಗು ಈ ದುಸ್ಥಿತಿಗೆ ಬಂದು ತಲಪಿದ್ದು, ಮೂಲ ನಿವಾಸಿಗಳು ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಇದೀಗ ಕೊಡಗು ಜಿಲ್ಲೆಯಲ್ಲೂ ಉದ್ಭವವಾಗಿದ್ದು, ಶೇ.95 ರಷ್ಟು ಗ್ರಾಮಸ್ಥರು ನಮ್ಮ ವಾದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಾರೆ ಎಂದು ನಂಜಪ್ಪ ಹೇಳಿದರು.
ಮಡಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಕಾಲೂರು, ಸಂಪಾಜೆ ಸೇರಿದಂತೆ ಇನ್ನೂ ಕೆಲವು ಗ್ರಾಮಗಳ ಮೂಲನಿವಾಸಿಗಳು ಮಹಾಮಳೆಯ ಧಾಳಿಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡು ದು:ಖದಲ್ಲಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರ ಹಿತದೃಷ್ಟಿ ಮತ್ತು ಕೊಡಗಿನ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲವು ನಿರ್ಣಯಗಳನ್ನು ಟ್ರಸ್ಟ್ ತೆಗೆದು ಕೊಂಡಿದ್ದು, ಇದನ್ನು ಜಿಲ್ಲಾಡಳಿತಕ್ಕೆ ನೀಡುವದಾಗಿ ತಿಳಿಸಿದರು.
(ಮೊದಲ ಪುಟದಿಂದ)
ಸುರಕ್ಷಿತ ಪ್ರದೇಶದಲ್ಲಿ ಪುನರ್ ವಸತಿ
ಗುಡ್ಡ ಕುಸಿತ ಮತ್ತು ಪ್ರವಾಹದಿಂದ ನೆಲೆ ಕಳೆದುಕೊಂಡವರಿಗೆ ಅದೇ ಪ್ರದೇಶದಲ್ಲಿ ನೆಲೆಸಲು ಭೂಮಿ ನೀಡುವದಾದರೆ ವೈಜ್ಞಾನಿಕ ಸಲಹೆಯನ್ನು ಪಡೆದುಕೊಳ್ಳಬೇಕು. ಈ ಪ್ರದೇಶಗಳು ಸುರಕ್ಷಿತವಲ್ಲವೆಂದು ವರದಿ ಲಭಿಸಿದರೆ ಹಾನಿ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಬೇಕು. ಮೀಸಲು ಅರಣ್ಯ ಪ್ರದೇಶಗಳಾದ ಆನೆಕಾಡು, ದುಬಾರೆ, ದೇವಮಚ್ಚಿ, ಹುದುಗೂರು ಮೀಸಲು ಅರಣ್ಯಗಳಲ್ಲಿ ಅಥವಾ ಜಿಲ್ಲೆಯಲ್ಲಿ ಲಭ್ಯವಿರುವ ಪೈಸಾರಿ ಜಾಗಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ 1961 ಮತ್ತು 1978ರ ನಂತರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಈ ವರ್ಷದ ಪ್ರವಾಹ ಅತ್ಯಂತ ಗರಿಷ್ಠ ಮಟ್ಟದ್ದಾಗಿದ್ದು, ಈ ಮಟ್ಟವನ್ನು ಸರ್ಕಾರ ಗುರುತಿಸಬೇಕು. ಗುಡ್ಡಗಳ ತಳಭಾಗದಲ್ಲಿ ಮತ್ತು ನದಿ ಪಾತ್ರದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ವಸತಿಗಳ ನಿರ್ಮಾಣಕ್ಕೆ ನಿರ್ಬಂಧ ಹೇರಬೇಕು. ಗರಿಷ್ಠ ಪ್ರವಾಹದ ಮಟ್ಟದಿಂದ 500 ಮೀಟರ್ ಅಂತರದ ನಂತರವೆ ಭೂ ಪರಿವರ್ತನೆಗೆ ಅವಕಾಶ ನೀಡಬೇಕು ಎಂದರು.
ಪ್ರವಾಸೋದ್ಯಮ ರದ್ದು ಮಾಡಿ
ಕೊಡಗು ಜಿಲ್ಲೆ ಅಕ್ಷರಶಃ ಸೂತಕದ ಮನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಪತ್ತು ಪ್ರವಾಸೋದ್ಯಮ ಎನ್ನುವ ದಂಧೆ ಆರಂಭಿಸುವ ಚಿಂತನೆ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು. ಕನಿಷ್ಟ 1 ವರ್ಷದವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ನಿರ್ಬಂಧಿಸಬೇಕೆಂದು ಡಾ. ನಂಜಪ್ಪ ಒತ್ತಾಯಿಸಿದರು.ದೊಡ್ಡ ದೊಡ್ಡ ರೆಸಾರ್ಟ್‍ಗಳು ಕೊಡಗಿನ ಪರಿಸರವನ್ನು ದಂಧೆಗೆ ಬಳಸಿಕೊಂಡು ಕೋಟ್ಯಾಂತರ ರೂ. ಲಾಭ ಗಳಿಸಿವೆ ಎಂದು ಆರೋಪಿಸಿದ ಅವರು, ಲಾಭ ಗಳಿಸಿದವರು ಸಂಕಷ್ಟದ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆಗೆ ಮರಳಿ ಏನನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಕೊಡಗಿನ ಸಮುದಾಯದತ್ತ ತಾಣಗಳಾದ ದೇವರಕಾಡು, ಗೋಮಾಳ, ಊರುಡುವೆ, ಹೊಳೆÉದಂಡೆ ಮತ್ತು ಕೆರೆ ದಂಡೆಗಳ ಅಕ್ರಮ ಒತ್ತುವರಿದಾರರನ್ನು ಗುರುತಿಸಬೇಕು. ಒತ್ತುವರಿದಾರರಿಗೆ ಪಿರಿಯಾಪಟ್ಟಣ, ಹÀುಣಸೂರು ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಮೂಲಕ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಬೇಕು ಎಂದರು. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕೊಡಗಿನಲ್ಲಿ ಮಿತಿಮೀರಿ ಜನಸಂಖ್ಯೆ ನೆಲೆಸುವದನ್ನು ನಿರ್ಬಂಧಿಸಬೇಕೆಂದು ಹೇಳಿದರು.
6 ತಿಂಗಳು ಟಿಂಬರ್ ಸಾಗಾಟ ಬೇಡ
ಟಿಂಬರ್ ಮತ್ತು ಮರಳು ಮಾಫಿಯಾಗಳು ಜಿಲ್ಲೆಯ ಶ್ರೀಮಂತ ಪರಿಸರವನ್ನು ಬರಡಾಗಿಸಿದ್ದು, ರಸ್ತೆಗಳು ಹಾಳಾಗುವ ಕಾರಣದಿಂದ ಮುಂದಿನ 6 ತಿಂಗಳ ಕಾಲ ಟಿಂಬರ್ ಸಾಗಾಟ ನಿಷೇಧಿಸಬೇಕೆಂದು ಡಾ. ನಂಜಪ್ಪ ಒತ್ತಾಯಿಸಿದರು. ಪರಿಸರಕ್ಕೆ ಮಾರಕವಾದ ಗದ್ದೆ, ತೋಟಗಳ ಪರಿವರ್ತನೆ ನಿಲ್ಲಿಸಬೇಕು, ನೈಸರ್ಗಿಕ ಬೆಟ್ಟಗಳು ವಿರೂಪಗೊಳ್ಳದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಹೈಟೆನ್ಶನ್ ವಿದ್ಯುತ್ ಮಾರ್ಗ, ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ ಮತ್ತು ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸುವದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ಚೇಂದಂಡ ಜಫ್ರಿ ಮುತ್ತಣ್ಣ, ಖಜಾಂಚಿ ಸೋಮೆಯಂಡ ಡಿ. ಉದಯ ಹಾಗೂ ಟ್ರಸ್ಟಿ ಎ.ವಿ. ಕಾರ್ಯಪ್ಪ ಉಪಸ್ಥಿತರಿದ್ದರು.