ಸಿದ್ದಾಪುರ, ಸೆ. 6: ಈ ಬಾರಿಯ ಮಹಾಮಳೆಗೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿದೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಡು, ನಲವತ್ತೇಕರೆ, ಬರಡಿಯ ಕುಂಬಾರಗುಂಡಿಯ ವ್ಯಾಪ್ತಿಯಲ್ಲಿ ನದಿ ದಡದ ಮನೆಗಳು ಬಿರುಕು ಬಿಟ್ಟಿದೆ, ಅನೇಕ ಮನೆಗಳು ಹಾನಿಯಾಗಿ ಕುಸಿದಿರುತ್ತದೆ. ನದಿದಡದ ನಿವಾಸಿಗಳಿಗೆ ಕಂದಾಯ ಇಲಾಖೆಯಿಂದ ತುರ್ತು ಪರಿಹಾರವಾಗಿ ರೂ.3,800 ಚೆಕ್‍ಗಳನ್ನು 72 ಕುಟುಂಬಗಳಿಗೆ ವಿತರಿಸಿದರು.

ಜೋಡುಪಾಲದಲ್ಲಿ ಇತ್ತೀಚೆಗೆ ನೆರೆಹಾವಳಿಗೆ ತುತ್ತಾದಾಗ ಅರಂತೋಡು ಎಸ್‍ಕೆಎಸ್‍ಎಸ್‍ಎಫ್‍ನ ತಾಜುದ್ದೀನ್ ಟರ್ಲಿ 12 ಮಂದಿ ಮತ್ತು ಕಲ್ಲುಗುಂಡಿಯ 4 ಯುವಕರಿಗೆ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್ ಪ್ರತಿಷ್ಠಾನ ವತಿಯಿಂದ ಮುಂದೆ ನಡೆಯುವ ಕಾರ್ಯಕ್ರಮದಲ್ಲಿ ಯುವಕರನ್ನು ಸಚಿವರನ್ನು ಕರೆಸಿ ಸನ್ಮಾನಿಸಲಾಗುವದೆಂದರು ಅಲ್ಲದೆ ಜಿಲ್ಲಾ ಆಡಳಿತದಿಂದ ಇವರಿಗೆ ಪ್ರಶಂಶನಾ ಪತ್ರವನ್ನು ನೀಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ.