ಸೋಮವಾರಪೇಟೆ, ಸೆ. 6: ನಿಯಮಾನುಸಾರವಾಗಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಪಡೆದ ಮೀನು ಸಾಕಾಣೆಯ ಹಕ್ಕನ್ನು ಕಸಿಯುವ ಪ್ರಯತ್ನ ಕೆಲವೊಂದು ಅಧಿಕಾರಿ ಗಳಿಂದ ನಡೆಯುತ್ತಿದ್ದು, ಪಡೆದಿರುವ ಟೆಂಡರನ್ನು ರದ್ದು ಗೊಳಿಸಿದರೆ ಪ್ರತಿಭಟನೆಯೊಂದಿಗೆ ಕಾನೂನು ಹೋರಾಟ ಎದುರಿಸ ಬೇಕಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ ಎಚ್ಚರಿಸಿದೆ.
ತಾಲೂಕಿನ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮೆಣಸ ಗ್ರಾಮದ ದೊಡ್ಡಕೆರೆಯಲ್ಲಿ ಮೀನು ಸಾಕಾಣಿಕೆಗೆ ಹರಾಜು ಪ್ರಕ್ರಿಯೆಯು ಪಂಚಾಯಿತಿಯ ನೀತಿ-ನಿಯಮದಂತೆ ನಡೆದಿತ್ತು. ಹರಾಜು ಪ್ರಕ್ರಿಯೆಯಂತೆ ಮೆಣಸ ಗ್ರಾಮದ ಗ್ರಾಮಸ್ಥ ಪರಿಶಿಷ್ಟ ಜನಾಂಗಕ್ಕೆ ಸೇರಿದ ಎಂ.ಡಿ. ದೇವರಾಜು ಅವರು, ನಿಯಮದಂತೆ ಠೇವಣಿ ಮೊತ್ತವನ್ನು ಪಾವತಿಸಿ, ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಅವಕಾಶವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಎಂ.ಡಿ. ದೇವರಾಜು ಅವರಿಗೆ ಟೆಂಡರ್ ಆಗಿದ್ದನ್ನು ಸಹಿಸದ ಪರಿಶಿಷ್ಟ ಮುಖಂಡ ಎನಿಸಿಕೊಂಡ ಅದೇ ಗ್ರಾಮದ ರಾಜಪ್ಪ ಎಂಬವರು ಟೆಂಡರ್ ಕರೆದ ಮೂರು ದಿನಗಳ ನಂತರದಲ್ಲಿ ಗ್ರಾಮದ ದೊಡ್ಡಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಅವಕಾಶ ಕೊಡಬಾರದೆಂದು ಆಕ್ಷೇಪಣೆ ಮಾಡಿರುತ್ತಾರೆ. ಓರ್ವ ಪರಿಶಿಷ್ಟನಿಗಾಗಿರುವ ಟೆಂಡರ್ ಅನ್ನು ಮುಖಂಡನೆನಿಸಿಕೊಂಡ ವ್ಯಕ್ತಿ ಆಕ್ಷೇಪಿಸುತ್ತಿರುವ ಪ್ರಯತ್ನವನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು. ಅವರ ಆಕ್ಷೇಪದ ಹಿನ್ನೆಲೆ ಗ್ರಾ.ಪಂ. ವಿಶೇಷ ಸಾಮಾನ್ಯ ಸಭೆ ಕರೆದು ಅಲ್ಲಿಯೂ ಕೂಡ ವಿಚಾರವನ್ನು ಪ್ರಸ್ತಾಪಿಸಿ, ಮೀನು ಸಾಕಾಣಿಕೆ ಮಾಡಲು ಅವಕಾಶವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಎಂ.ಡಿ. ದೇವರಾಜು ಅವರಿಗೆ ಟೆಂಡರ್ ಆಗಿದ್ದನ್ನು ಸಹಿಸದ ಪರಿಶಿಷ್ಟ ಮುಖಂಡ ಎನಿಸಿಕೊಂಡ ಅದೇ ಗ್ರಾಮದ ರಾಜಪ್ಪ ಎಂಬವರು ಟೆಂಡರ್ ಕರೆದ ಮೂರು ದಿನಗಳ ನಂತರದಲ್ಲಿ ಗ್ರಾಮದ ದೊಡ್ಡಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಅವಕಾಶ ಕೊಡಬಾರದೆಂದು ಆಕ್ಷೇಪಣೆ ಮಾಡಿರುತ್ತಾರೆ. ಓರ್ವ ಪರಿಶಿಷ್ಟನಿಗಾಗಿರುವ ಟೆಂಡರ್ ಅನ್ನು ಮುಖಂಡನೆನಿಸಿಕೊಂಡ ವ್ಯಕ್ತಿ ಆಕ್ಷೇಪಿಸುತ್ತಿರುವ ಪ್ರಯತ್ನವನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು. ಅವರ ಆಕ್ಷೇಪದ ಹಿನ್ನೆಲೆ ಗ್ರಾ.ಪಂ. ವಿಶೇಷ ಸಾಮಾನ್ಯ ಸಭೆ ಕರೆದು ಅಲ್ಲಿಯೂ ಕೂಡ ವಿಚಾರವನ್ನು ಪ್ರಸ್ತಾಪಿಸಿ, ಮೀನು ಆದರೆ ಆಕ್ಷೇಪ ವ್ಯಕ್ತಪಡಿಸಿದ ರಾಜಪ್ಪ ಸೇರಿದಂತೆ ಬೆರಳೆಣಿಕೆ ಮಂದಿಯಷ್ಟೆ ಆಕ್ಷೇಪಿಸಿದರೆ, ಉಳಿದಂತೆ ಗ್ರಾ.ಪಂ. ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಮೀನು ಸಾಕಾಣಿಕೆಗೆ ಒತ್ತಾಯಿಸಿ ದ್ದಾರೆ. ಆದರೆ ಅಧಿಕಾರಿಗಳಲ್ಲಿ ತಾನು ಪರಿಶಿಷ್ಟ ಮುಖಂಡ ಎಂದು ಹೇಳಿಕೊಳ್ಳುತ್ತಾ, ಅನುಮತಿ ನೀಡದಂತೆ ಒತ್ತಡ ಹಾಕುತ್ತಿದ್ದಾರೆಂದು ಆರೋಪಿ ಸಿದ ಮಂಜುನಾಥ್, ವೈಯಕ್ತಿಕ ದ್ವೇಷ ಸಾಧಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಕಾನೂನಾತ್ಮಕವಾಗಿ ನಡೆದ ಟೆಂಡರ್ ಪ್ರಕ್ರಿಯೆಯು ಪರಿಶಿಷ್ಟ ದೇವರಾಜು ಅವರಂತಾಗಿದೆ. ಇದನ್ನು ಅವರಿಗೆ ನೀಡದೆ, ಅವರ ಹಕ್ಕನ್ನು ಕಿತ್ತುಕೊಂಡಲ್ಲಿ ಗ್ರಾಪಂ ವಿರುದ್ಧ ಪ್ರತಿಭಟನೆ ಹಾಗೂ ಕಾನೂನಿನ ಮೊರೆ ಹೋಗಲಾಗುವದು ಎಂದು ಎಚ್ಚರಿಸಿ ದರು. ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಮಿತಿ ಸದಸ್ಯ ಸಣ್ಣಪ್ಪ, ಶನಿವಾರಸಂತೆ ಹೋಬಳಿ ಅಧ್ಯಕ್ಷ ಎಂ.ಎಂ. ಸಿದ್ದಯ್ಯ, ಮೆಣಸ ಗ್ರಾಮದ ಎಂ.ಡಿ. ದೇವರಾಜು, ಸುಮೇಶ್ ಉಪಸ್ಥಿತರಿದ್ದರು.