ಮಡಿಕೇರಿ, ಸೆ. 6 : ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮ 1960ರ ಪ್ರಕಾರ ನೋಂದಾವಣೆ ಯಾಗಿ, ನೆಹರು ಯುವ ಕೇಂದ್ರ ದಲ್ಲಿ ಮಾನ್ಯತೆ ಪಡೆದು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕ ವಾಗಿ ಕ್ರಿಯಾತ್ಮಕವಾದ ಚಟುವಟಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಗಳ ಮೂಲಕ ಸಾಮುದಾಯಿಕ, ಗ್ರಾಮದ ಅಭಿವೃದ್ಧಿಗಾಗಿ ನಿಸ್ವಾರ್ಥತೆ ಯಿಂದ ಸೇವೆಯನ್ನು ಸಲ್ಲಿಸಿರುವ ಗ್ರಾಮೀಣ ಯುವಕ ಸಂಘ, ಯುವತಿ ಮಂಡಳಿಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ “ಯುವÀ ಸಂಘ ಪ್ರಶಸ್ತಿ” ನೀಡಲಾಗುವುದು. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಸಂಘ ಮಂಡಳಿ ರಾಜ್ಯ ಮಟ್ಟದ ಸ್ಪರ್ಧೆಗೆ ತಾನೆ ತಾನಾಗಿ ಅರ್ಹತೆ ಪಡೆಯುತ್ತದೆ.
ಯುವ ಸಂಘಗಳು ಕಳೆದ ವರ್ಷ ಅಂದರೆ ದಿನಾಂಕ 1.4.2017 ರಿಂದ 31.3.2018ರ ಅವಧಿಯಲ್ಲಿ ಸಮುದಾಯದ ಬೆಳವಣಿಗೆಗೆ ಸಲ್ಲಿsಸಿರುವ ಸ್ವಯಂ ಸೇವಾ ಕಾರ್ಯಗಳ ದೃಡೀಕರಣ ಪತ್ರಗಳು, ಭಾವಚಿತ್ರ ಇತ್ಯಾದಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳ ಕಾರ್ಯಾಲಯ ನೆಹರು ಯುವ ಕೇಂದ್ರ, ಯಶುನಿಲಯ, ಬ್ಲಾಕ್ ನಂ:8, ಕಾವೇರಿ ಲೇಔಟ್ , ಮಡಿಕೇರಿ – 571201 ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು. ಭರ್ತಿ ಮಾಡಿದ ಆರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ದಿನಾಂಕ 24.09.2018 ರಂದು ಸಂಜೆ 5.00 ಗಂಟೆಯೊಳಗಾಗಿ ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ:08272-225470 ಅನ್ನು ಸಂಪರ್ಕಿಸಲು ಕೋರಿದೆ.