ಗೋಣಿಕೊಪ್ಪಲು ವರದಿ, ಸೆ. 6: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನ ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಂಟಿ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಪಿ.ಟಿ. ಬೋಪಣ್ಣ, ಹೆಚ್. ಪಿ. ಮೋನಿಷ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಕೆ.ಬಿ. ಆರ್ಯ ಆಯ್ಕೆಯಾದರು.

ತರಗತಿ ಪ್ರತಿನಿಧಿಗಳಾಗಿ ಪ್ರಥಮ ಪಿ.ಯು.ಸಿ. ಕಲಾ ವಿಭಾಗದಿಂದ ಬಿ.ಜಿ. ದಿಜನ್ ಚಂಗಪ್ಪ, ಹೆಚ್.ಆರ್. ಕಾವ್ಯ, ವಾಣಿಜ್ಯ ವಿಭಾಗದಲ್ಲಿ ಎಂ.ಎನ್. ಶಕೀನ್, ಕೆ.ವಿ. ವಿಶ್ಮಾ, ಟಿ.ಆರ್. ಸನಲ್, ಡಿ.ವಿ. ಹರ್ಷಿತ, ವಿಜ್ಞಾನ ವಿಭಾಗದಿಂದ ಎಂ.ಪಿ. ರಕ್ಷಿತ್ ದೇವಯ್ಯ, ಕೆ. ಅಜನ್ಯಾ, ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಿಂದ ಕೆ.ಎನ್. ರಾಹುಲ್ ಚಿಣ್ಣಪ್ಪ, ಹೆಚ್.ಪಿ. ಮೋನಿಷ, ಪಿ.ಟಿ. ಬೋಪಣ್ಣ, ಡಿ.ವಿ. ದೇಶಿಕ, ವಿಜ್ಞಾನ ವಿಭಾಗದಿಂದ ಕೆ.ಜೆ. ಅನಿಲ್ ಹಾಗೂ ಎಸ್. ಪಲ್ಲವಿ ಆಯ್ಕೆಯಾದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಎಸ್.ಆರ್. ತಿರುಮಲಯ್ಯ ಹಾಗೂ ಚೇತನ್ ಚಿಣ್ಣಪ್ಪ ಆಯ್ಕೆ ಪ್ರಕ್ರಿಯೆ ನಡೆಸಿದರು.