ಮಡಿಕೇರಿ, ಸೆ. 6: ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಜಮಾಬಂದಿ ಗ್ರಾಮಸಭೆಯು ತಾ. 10 ರಂದು ಹಗಲು 11 ಗಂಟೆಗೆ ಪಂಚಾಯಿತಿ ಸಭಾ ಭವನದಲ್ಲಿ ಅಧ್ಯಕ್ಷೆ ಕುಸುಮ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬಿಟ್ಟಂಗಾಲ

ಬಿಟ್ಟಂಗಾಲ ಗ್ರಾ.ಪಂ. ಜಮಾಬಂದಿ ಸಭೆಯು ತಾ. 10 ರಂದು ಬೆಳಿಗ್ಗೆ 10.30 ಗಂಟೆಗೆ ಅಧ್ಯಕ್ಷ ಪಿ. ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕೆದಮುಳ್ಳೂರು

ಕೆದಮುಳ್ಳೂರು ಗ್ರಾ.ಪಂ. ಗ್ರಾಮಸಭೆಯು ತಾ. 11 ರಂದು ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷೆ ರೋಹಿಣಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.