ವೀರಾಜಪೇಟೆ ಸೆ. 6: ಮಲೆತಿರಿಕೆ ಬೆಟ್ಟದಲ್ಲಿರುವ ಶನೀಶ್ವರ ದೇವಸ್ಥಾನದಲ್ಲಿ ತಾ. 8 ರಂದು ಕೊನೆ ಶ್ರಾವಣ ಪೂಜಾ ಮಹೋತ್ಸವ ಜರುಗಲಿದೆ ಎಂದು ಶನೇಶ್ವರ ಭಕ್ತಜನ ಮಂಡಳಿಯ ಸಂಚಾಲಕ ಯುವರಾಜ್ ಕೃಷ್ಣ ತಿಳಿಸಿದ್ದಾರೆ.
ಕೊನೆ ಶ್ರಾವಣ ಮಹೋತ್ಸವದ ಪ್ರಯುಕ್ತ ಶನಿವಾರ ಬೆಳಿಗ್ಗೆ 5 ಗಂಟೆಗೆ ಅಭಿಷೇಕ ಪೂಜೆ, 7 ಗಂಟೆಗೆ ಕಳಸ ಸ್ಥಾಪನೆ 8 ಗಂಟೆಗೆ ನವಗ್ರಹ ಪೂಜೆ
ನಂತರ ಮಹಾಪೂಜಾ ಸೇವೆ ನಡೆಯಲಿದೆ.
ಅರಮೇರಿ ಕಳಂಚೇರಿ ಮಠದ ಶಾಂತಾಮಲ್ಲಿಕಾರ್ಜುನ ಸ್ವಾಮಿ ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ, ಡಿ.ಪಿ.ರಾಜೇಶ್, ವರ್ಗೀಸ್ ಲೆನಿನ್, ಮಂಡೇಪಂಡ ಕಾಳಪ್ಪ, ಬೆಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಫಾರೂಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ವಾದ್ಯಗೋಷ್ಠಿಯೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ರಾತ್ರಿ 9 ಗಂಟೆಗೆ ಉತ್ಸವ ಮೂರ್ತಿ ಸ್ವಾಮಿಯ ಕ್ಷೇತ್ರ ಪ್ರದಕ್ಷಿಣೆ ಮಹಾ ಪೂಜಾ ಸೇವೆ ನಡೆಯಲಿದೆ.