ಮಡಿಕೇರಿ, ಸೆ. 6: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಕೊಡಗು ರಿಲೀಫ್ ಸೆಲ್ ವತಿಯಿಂದ ಆಟೋರಿಕ್ಷಾ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಗುಡ್ಡ ಕುಸಿತದಿಂದ ಆಟೋ ರಿಕ್ಷಾವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಸುಖಾಂತ್ ಎಂಬವರಿಗೆ ಆಟೋರಿಕ್ಷಾ ಹಾಗೂ ನಗರದ ಕೈಗಾರಿಕಾ ಬಡಾವಣೆ ಜಲಾವೃತ ಗೊಂಡು ನಷ್ಟ ಅನುಭವಿಸಿದ ಪ್ರಕಾಶ್ ಎಂಬವರ ವರ್ಕ್‍ಶಾಪ್‍ಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಂಘಟನೆಯ ಪ್ರಮುಖರು ಹಸ್ತಾಂತರಿಸಿದರು.
ಕೊಡಗು ರಿಲೀಫ್ ಸೆಲ್‍ನ ವಲಯ ಮೇಲ್ವಿಚಾರಕÀ ಅಬ್ದುಲ್ ಸಲಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ವಿ.ಎನ್. ಪ್ರಕಾಶ್, ಮೌಲಾನಾ ಅಬ್ದುಲ್ ಹಕೀಂ, ಹೆಚ್‍ಆರ್‍ಎಸ್ ವಲಯ ಸಂಚಾಲಕ ಸಿ.ಹೆಚ್. ಅಫ್‍ಜರ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷÀ ಅಂಬೆಕಲ್ ನವೀನ್ ಕುಶಾಲಪ್ಪ, ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕÀ ಬಾಬುಚಂದ್ರ ಉಳ್ಳಾಗಡ್ಡಿ, ಉದ್ಯಮಿ ಅಬ್ರಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.