ಮಡಿಕೇರಿ, ಸೆ. 5: ಭಾರೀ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಮರಾಠ-ಮರಾಟಿ ಸಮೂಹದ 75ಕ್ಕೂ ಹೆಚ್ಚಿನ ಕುಟುಂಬಗಳು ಬದುಕಿನ ನೆಲೆಯನ್ನು ಕಳೆದುಕೊಂಡಿದ್ದು, ಇವರುಗಳನ್ನು ಒಳಗೊಂಡಂತೆ ಸಂತ್ರಸ್ತರೆಲ್ಲರಿಗೂ ವಸತಿ ಸೌಲಭ್ಯದೊಂದಿಗೆ ಕನಿಷ್ಟ ಮೂರು ಎಕರೆ ಕೃಷಿ ಭೂಮಿಯನ್ನು ಒದಗಿಸುವಂತೆ ಕೊಡಗು ಜಿಲ್ಲಾ ಮರಾಠ-ಮರಾಟಿ(ಪರಿಶಿಷ್ಟ ಪಂಗಡ) ಸಮಾಜ ಸೇವಾ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಮಾತನಾಡಿ, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ಮಡಿಕೇರಿ, ಸೆ. 5: ಭಾರೀ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಮರಾಠ-ಮರಾಟಿ ಸಮೂಹದ 75ಕ್ಕೂ ಹೆಚ್ಚಿನ ಕುಟುಂಬಗಳು ಬದುಕಿನ ನೆಲೆಯನ್ನು ಕಳೆದುಕೊಂಡಿದ್ದು, ಇವರುಗಳನ್ನು ಒಳಗೊಂಡಂತೆ ಸಂತ್ರಸ್ತರೆಲ್ಲರಿಗೂ ವಸತಿ ಸೌಲಭ್ಯದೊಂದಿಗೆ ಕನಿಷ್ಟ ಮೂರು ಎಕರೆ ಕೃಷಿ ಭೂಮಿಯನ್ನು ಒದಗಿಸುವಂತೆ ಕೊಡಗು ಜಿಲ್ಲಾ ಮರಾಠ-ಮರಾಟಿ(ಪರಿಶಿಷ್ಟ ಪಂಗಡ) ಸಮಾಜ ಸೇವಾ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಮಾತನಾಡಿ, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ಪರಂಬುವಿನ 1, ಬೇತ್ರಿಯ 1, ಹೆಮ್ಮೆತ್ತಾಳು 2, ಮಂಗಳದೇವಿನಗರ 2 ಹಾಗೂ ತಂತಿಪಾಲದ 1 ಮರಾಠ-ಮರಾಟಿ ಕುಟುಂಬದ 300 ಕ್ಕಿಂತಲೂ ಹೆಚ್ಚಿನ ಮಂದಿ ಮನೆ-ಮಠಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದರೆ, ಮತ್ತೆ ಹಲವರು ತಮ್ಮ ಸಂಬಂಧಿಕರ, ಗೆಳೆಯರ ಮನೆಯ ಆಶ್ರಯವನ್ನು ಪಡೆದಿದ್ದಾರೆ. ಇವರೆಲ್ಲರ ಬದುಕಿಗೆ ಶಾಶ್ವತ ಪರಿಹಾರ ಕಾರ್ಯಗಳನ್ನು ನಡೆಸಿಕೊಡುವದು ಅವಶ್ಯವೆಂದರು.

ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು ಹೊಂದಿಕೊಂಡಿರುವ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಬೇಕು, ನಿರಾಶ್ರಿತರಿಗೆ ಕೊಡಗಿನ ಸುತ್ತಮುತ್ತ ಮೂಲಭೂತ ಸೌಕರ್ಯಗಳನ್ನೊಳಗೊಂಡ ವಸತಿ ಹಾಗೂ ಕೃಷಿ ಮಾಡಲು ಯೋಗ್ಯವಾದ ಕನಿಷ್ಟ ಮೂರು ಎಕರೆ ಕೃಷಿ ಭೂಮಿಯನ್ನು ನೀಡಬೇಕು, ವಿದ್ಯಾರ್ಹತೆ ಇರುವವರಿಗೆ ಸರಕಾರಿ ನೌಕರಿಯನ್ನು ನೀಡಬೇಕು, ಪ್ರವಾಹದಲ್ಲಿ ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡವರಿಗೆ ದಾಖಲಾತಿ ಯನ್ನು ಪಡೆದುಕೊಳ್ಳಲು ಬೇಕಾದ ವ್ಯವಸ್ಥೆ, ನಿರಾಶ್ರಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಜೀವನಾವಲಂಭಿತ ವಾಹನಗಳನ್ನು ಕಳೆದುಕೊಂಡವರಿಗೆ ಅಗತ್ಯ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘÀಟನೆಯ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ, ಸಂಘÀಟನಾ ಕಾರ್ಯದರ್ಶಿ ಎಂ.ಟಿ. ಗುರುವಪ್ಪ, ಯುವ ವೇದಿಕೆ ಖಜಾಂಚಿ ಸಂಪತ್ ಕುಮಾರ್ ಎಂ.ವಿ., ನಿರಾಶ್ರಿತರಾದ ಉದಯಗಿರಿಯ ಎಂ.ಇ. ಸಂತೋಷ್ ಕುಮಾರ್, ಕಾಂಡನಕೊಲ್ಲಿಯ ಸಂತ್ರಸ್ತೆ ಎಂ.ಎ. ಪ್ರೇಮ ಉಪಸ್ಥಿತರಿದ್ದರು.