ಸುಂಟಿಕೊಪ್ಪ, ಸೆ. 5 : ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆ, ಮಣ್ಣು ಪಾಲಾಗಿದ್ದು ಜನರು ಆತಂತ್ರರಾಗಿದ್ದಾರೆ. ಆದರೂ, ಕೊಡಗಿನ ಪ್ರಮುಖ ಹಬ್ಬವಾದ ಕೈಲ್‍ಮುಹೂರ್ತ ಹಬ್ಬದ ಅಂಗವಾಗಿ ಶಿರಂಗಳ್ಳಿ ಗ್ರಾಮದ ವಯೋವೃದ್ಧೆ ಮೊಟ್ಟನಾಳಿರ ಕಾರ್ಯಪ್ಪ ನೀಲಮ್ಮ ತನ್ನ ಮಗನೊಂದಿಗೆ ಗ್ರಾಮದ ಮನೆಗೆ ಬರೆ ಕುಸಿತದ ಕೆಸರು ಮಣ್ಣಿನ ನಡುವೆ ದುರ್ಗಮ ಹಾದಿಯಲ್ಲಿ ಸಾಗಿ ಸಂಪ್ರದಾಯವನ್ನು ಆಚರಿಸಿದ್ದು ವಿಶೇಷವಾಗಿತ್ತು.

ಶಿರಂಗಳ್ಳಿ ಗ್ರಾಮಕ್ಕೆ ಮಾದಾಪುರ ದಿಂದ ತೆರಳುವ ರಸ್ತೆ ಕುಸಿದು ಬಿದ್ದಿದೆ. ಸೂರ್ಲಬ್ಬಿಯಿಂದಲೂ ಶಿರಂಗಳ್ಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದೆ ಒಟ್ಟಾರೆ ಶಿರಂಗಳ್ಳಿ, ಗರ್ವಾಲೆ ಗ್ರಾಮಸ್ಥರಿಗೆ ಇರುವ ವಾಸದ ಮನೆಗಳಿಗೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ. ಪಕೃತಿ ವಿಕೋಪದಿಂದ ತೋಟ ಗದ್ದೆ ಕಳೆದುಕೊಂಡು ಮನೆ ಮಠಗಳನ್ನು ತೊರೆದು ಕುಶಾಲನಗರದ ಬಾಪೂಜಿ ಬಡಾವಣೆ ಯಲ್ಲಿ ನಲೆಸಿರುವ ಮಗನ ಮನೆಯಲ್ಲಿ ಆಶ್ರಯ ಪಡೆದಿದ್ದ ಶಿರಂಗಳ್ಳಿ ಗ್ರಾಮದ ನೀಲಮ್ಮ ಕಾರ್ಯಪ್ಪ (80) ಮಹಿಳೆ ತನ್ನ ಹಿರಿಯ ಮಗನಾದ ಸನ್ನಿ ಕಾರ್ಯಪ್ಪರೊಂದಿಗೆ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಕೈಲ್‍ಮುಹೂರ್ತ ಹಬ್ಬದ ಹಿನ್ನಲೆ ತಮ್ಮ ಸ್ವಂತ ಮನೆಯನ್ನು ಸ್ವಚ್ಛಗೊಳಿಸಿ ದೇವರಿಗೆ ದೀಪ ಹಚ್ಚಲು ತೆರಳುತ್ತಿರುವದು.