ಮಡಿಕೇರಿ, ಸೆ. 7: ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದಲ್ಲಿ ಅಲ್ಲಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿನಿಯರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿಯರ ತಂಡ ಭರ್ಜರಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸೆಂಟ್ ಇಫ್ರೇಶಿಯಸ್ ಶಾಲಾ ತಂಡವನ್ನು 10-0 ಗೋಲಿನಿಂದ ಮಣಿಸಿದೆ. ತಂಡದ ಪರ ಜಾಹ್ನವಿ 4, ಆದಿರಾ 2, ಸುರಕ್ಷಾ 2, ನಿಸರ್ಗ 2 ಗೋಲು ಬಾರಿಸಿದರು. ಆದಿರಾ ನಾಯಕಿಯಾಗಿರುವ ತಂಡದಲ್ಲಿ ಜಾಹ್ನವಿ, ಕುಡೆಕಲ್ ಸುರಕ್ಷಾ, ತÀಡಿಯಪ್ಪನ ಸುಚಿತ, ಸೂರ್ತಲೆ ಬೃಂದಾ, ಬಾರಿಕೆ ಜೀವಿತ, ಕೈಬಿಲಿ ದಿಲನ್, ಮಾಣಿರ ಪದ್ಮಿನಿ, ಚೇನಂಡ ರಕ್ಷಾ, ಪ್ರೇಕ್ಷಿತಾ, ಅಭಿನಂದನ, ಸಿದ್ಧಗಂಗ, ನಿಸರ್ಗ, ತುಷಾರ ಪಾಲ್ಗೊಂಡಿದ್ದಾರೆ. ತಂಡದ ತರಬೇತುದಾರರಾಗಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ತರಬೇತುದಾರ ಸುರೇಶ್ ಹಾಗೂ ವ್ಯವಸ್ಥಾಪಕಿಯಾಗಿ ಶಿಕ್ಷಕಿ ತೊತ್ತಿಯನ ರೋಹಿಣಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿವೆ.