ಕೂಡಿಗೆ, ಸೆ. 7: ಇಲ್ಲಿಗೆ ಸಮೀಪದ ಕೂಡುಮಗಳೂರು ಗ್ರಾ.ಪಂ. ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯು ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಮಹೇಶ್ ಕಾಳಪ್ಪ ಅತಿಯಾದ ಮಳೆಯಿಂದ ಹಾನಿಯಾದವರಿಗೆ ವಿತರಣೆ ಮಾಡಲು ಬಂದಿದ್ದ ವಸ್ತುಗಳನ್ನು ಗ್ರಾ.ಪಂ.ನವರು ವಹಿಸಿಕೊಳ್ಳಬೇಕಿತ್ತು. ಬೇರೆಯವರಿಗೆ ವಿತರಣೆ ಮಾಡಲು ಅವಕಾಶ ನೀಡಬಾರದಿತ್ತು ಎಂದು ಸಭೆಯ ಗಮನಕ್ಕೆ ತಂದರು.
ನಂತರ ಸಭೆಯಲ್ಲಿ 14ನೇ ಹಣಕಾಸಿನ ಕಾಮಗಾರಿಯ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ಗ್ರಾ.ಪಂ. ಉಪಾರ್ಧಯಕ್ಷ ಕೆ.ವಿ. ಸಣ್ಣಪ್ಪ ಗ್ರಾ.ಪಂ. ವ್ಯಾಪ್ತಿಯ ಪ್ರಮುಖ ಕೆರೆಯಾದ ಆನೆಕೆರೆಯಲ್ಲಿ ಹೆಚ್ಚು ನೀರು ಸಂಗ್ರಹಕ್ಕೆ ಆನೆಕೆÀರೆಯ ದಡ ಮತ್ತು ಕಟ್ಟೆಯನ್ನು ಒಂದೂವರೆ ಅಡಿಯಷ್ಟು ಎತ್ತಿಸಲು ಸೂಚಿದ್ದರು. ಇದಕ್ಕೆ ಸಭೆಯಲ್ಲಿದ್ದ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸಣ್ಣಪ್ಪ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷಾ ಸರಕಾರದ ಮಾಹಿತಿಗಳನ್ನು ಸಭೆಗೆ ನೀಡಿದರು. ಕಾರ್ಯದರ್ಶಿ ಮಾದಪ್ಪ ಸ್ವಾಗತಿಸಿ, ವಂದಿಸಿದರು.