ಮಡಿಕೇರಿ, ಸೆ. 7: ದಸರಾ ಸಮಿತಿಯ ಮಹಾ ಸಭೆಯು (2017-18ರ ಸಾಲಿನ ಲೆಕ್ಕಪತ್ರ ಮಂಡನೆ) ದಸರಾ ಸಮಿತಿ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ, ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರ ಉಪಸ್ಥಿತಿಯಲ್ಲಿ ತಾ. 10 ರಂದು ಸಂಜೆ 4 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.
ಸಭೆಗೂ ಮೊದಲು ಸಂಜೆ 3.30 ಗಂಟೆಗೆ ನಗರದ ಶ್ರೀ ಪೇಟೆ ರಾಮ ಮಂದಿರ ದೇವಾಲಯದಲ್ಲಿ ದಸರಾ ಸಮಿತಿ ವತಿಯಿಂದ ಪೂಜಾ ಕಾರ್ಯಕ್ರಮವಿದ್ದು, ದಸರಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ನಗರಸಭೆ ಸದಸ್ಯರು, ದಶಮಂಟಪ ಪದಾಧಿಕಾರಿಗಳು, ಕರಗ ಸಮಿತಿಯ ಪದಾಧಿಕಾರಿಗಳು ಹಾಜರಾಗ ಬೇಕೆಂದು ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಸಿ. ಚುಮ್ಮಿ ದೇವಯ್ಯ ಕೋರಿದ್ದಾರೆ.