ಮಡಿಕೇರಿ, ಸೆ. 7: ಶ್ರೀ ಬೊಟ್ಲಪ್ಪ ಯುವ ಸಂಘ ಕಡಗದಾಳು ಇವರ ವತಿಯಿಂದ ಭಜನಾ ಕಾರ್ಯಕ್ರಮ ಮತ್ತು ಸಹೋದರತೆಯನ್ನು ಬಿಂಬಿಸುವ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು. ಯುವ ಸಂಘದ ಸ್ಥಾಪನಾಧ್ಯಕ್ಷರೂ, ಗೌರವ ಸಲಹೆಗಾರರೂ ಆದ ಬಿ.ಎಸ್. ಜಯಪ್ಪ ರಕ್ಷಾಬಂಧನ ಆಚರಣೆ ಭಾರತೀಯ ಸಂಸ್ಕøತಿಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ. ರಾಷ್ಟ್ರೀಯತೆಯನ್ನು ಬಿಂಬಿಸುವ ಹಬ್ಬವಾಗಿದ್ದು, ಪರಸ್ಪರ ಪ್ರೀತಿ ಸ್ನೇಹದಿಂದ, ಸಹೋದರ-ಸಹೋದರಿಯರಂತೆ ಬೆಳೆಯುವಂತೆ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೆಳ್ಳಿ ಮಹೋತ್ಸವದ ಆಚರಣಾ ಸಮಿತಿಯ ಸಲಹಾ ಸಮಿತಿ ಸದಸ್ಯ ಎನ್.ಸಿ. ಸುನಿಲ್ ಉಪಸ್ಥಿತರಿದ್ದರು. ಯುವ ಸಂಘದ ಅಧ್ಯಕ್ಷ ಸಿ.ಕೆ. ಮಂಜು, ಮಾಜಿ ಅಧ್ಯಕ್ಷರುಗಳು, ಮಹಿಳಾ ಮತ್ತು ಪುರುಷ ಸದಸ್ಯರುಗಳು, ವಿಧ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಡೆಸಿಕೊಟ್ಟರು.