ಮಡಿಕೇರಿ, ಸೆ. 7: 33/11ಕೆವಿ ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸ ಬೇಕಾಗುವದರಿಂದ ತಾ. 8ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಸೋಮವಾರಪೇಟೆ ಟೌನ್ ಪಂಚಾಯಿತಿ, ಚೌಡ್ಲು, ಐಗೂರು, ಕಿರಂಗಂದೂರು ಪಂಚಾಯಿತಿ, ಬೇಳೂರು, ನೀರುಗಳೆಲೆ ಐಗೂರು, ಶಾಂತಳ್ಳಿ, ಎಡೂರು, ತಾಕೇರಿ ಬೆಟ್ಟದಹಳ್ಳಿ, ಹಾನಗಲ್ಲು, ತೋಳೂರು ಶೆಟ್ಟಳ್ಳಿ, ಕೂತಿ, ಜಕ್ಕನಳ್ಳಿ, ದೊಡ್ಡಮಳ್ತೆ, ಕೊತನಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ, ಅಬ್ಬೂರುಕಟ್ಟೆ, ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.